ನ್ಯಾಮತಿ:ತಾಲ್ಲೂಕಿನ ಹೊಸಕೊಪ್ಪಗ್ರಾಮದ, ರೈತ ಮುಖಂಡ ದಿವಂಗತಎಚ್.ಎಸ್. ರುದ್ರಪ್ಪಅವರಜೀವನ-ಹೋರಾಟ-ಸಾಧನೆಕುರಿತು ಸಿದ್ದವಾಗಿರುವ ಪುಸ್ತಕ ಬಿಡುಗಡೆ ಸಮಾರಂಭವನ್ನುಆಗಸ್ಟ್ ೧೯ರಂದು ಹಮ್ಮಿಕೊಳ್ಳಲಾಗುವುದು ಎಂದು ಪುಸ್ತಕದ ಸಂಪಾದಕಡಾ.ಎಚ್.ಎಸ್.ರುದ್ರೇಶ ತಿಳಿಸಿದರು.
ಪಟ್ಟಣದಕನ್ನಡ ಸಾಹಿತ್ಯ ಪರಿಷತ್ತುಕಚೇರಿಯಲ್ಲಿ ಸೋಮವಾರ ನಡೆದ ಸೌಹಾರ್ಧ ಸಭೆಯಲ್ಲಿಅವರು ಮಾತನಾಡಿದರು.
ರುದ್ರಪ್ಪಅವರಜನ್ಮದಿನ ಆಗಸ್ಟ್ ೧೯ರಂದು ಸರಳವಾಗಿ ಪುಸ್ತಕ ಬಿಡುಗಡೆಸಮಾರಂಭವನ್ನು ಹೊನ್ನಾಳಿ-ನ್ಯಾಮತಿಯಲ್ಲಿ ಹಮ್ಮಿಕೊಳ್ಳುವ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಪುಸ್ತಕದ ಸಹ ಸಂಪಾದಕಜೋಗದ ವೀರಪ್ಪ, ಹಿರಿಯರಾದಡಿ.ತೀರ್ಥಲಿಂಗಪ್ಪ, ಎಸ್.ಆರ್.ಬಸವರಾಜಪ್ಪ, ಸಾಧು ವೀರಶೈವ ಸಮುದಾಯದಅಧ್ಯಕ್ಷ ಬಿ.ಶಿವಪ್ಪ, ಜೋಗದ ಬಸವರಾಜಪ್ಪ, ಜಯಣ್ಣ, ಶತಕೋಟಿ ಬಸಪ್ಪ, ಕೋಡಿಕೊಪ್ಪದ ಎಚ್.ಶಿವಪ್ಪ,ಮಲ್ಲಿಗೇನಹಳ್ಳಿ ರಾಜಪ್ಪ ಮತ್ತು ಮುಖಂಡರು, ಜೋಗದ ಸೋಮಶೇಖರ, ರವಿಪಾಟೀಲ, ಕಸಾಪದಎಸ್.ಜಿ.ಬಸವರಾಜಪ್ಪ, ಜಿ.ನಿಜಲಿಂಗಪ್ಪ, ಎಂ.ಎಸ್.ಜಗದೀಶ, ಸೈಯದ್ಅಕ್ಬರ್ ಪಾಶಾ, ಷಡಾಕ್ಷರಿಇದ್ದರು.
ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಸ್ವಾಗತಿಸಿದರು.