ನ್ಯಾಮತಿ ತಾಲೂಕು ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಗಳಿಗೆ ಆರುಂಡಿ ಗ್ರಾಮದ ಎರಡನೆಯ ವಾರ್ಡಿನ ಸದಸ್ಯ ವೀರೇಶ ಸಿ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರುಗಳು ನಾಮಪತ್ರ ಅರ್ಜಿ ಸಲ್ಲಿಸಿದೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಾದ ಕಿಶೋರ್ ನಾಯ್ಕ ರವರು ಶ್ರೀ ವೀರೇಶ್ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕಾವೇರಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಕಾಶ್ ಡಿ ಬಿ, ತಿಮ್ಮೇಶ್ ಬಿ, ಚಂದ್ರಪ್ಪ, ಗಿರೀಶ್, ಕರಿಬಸಮ್ಮ, ಲಕ್ಷ್ಮಮಮ್ಮ, ಜಾನಮ್ಮ, ಗುತ್ಯಮ್ಮ, ಸೇರಿದಂತೆ ಪಿಡಿಓ ಸುರೇಶ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಸಹ ಇದ್ದರು.