ನ್ಯಾಮತಿ:ತಾಲ್ಲೂಕಿನಾದ್ಯಂತ ಮಳೆ ಪ್ರಮಾಣತಗ್ಗಿದರೂ, ಹಾನಿ ಪ್ರಮಾಣ ಮುಂದುವರೆದಿದೆ.
ಸೋಮವಾರ ಮತ್ತು ಮಂಗಳವಾರ ಮೋಡಕವಿದ ವಾತಾವರಣಇದ್ದು, ಸೋನೆ ಮಳೆಯಾಗುತ್ತಿದೆ.ತಾಲ್ಲೂಕಿನ ಮಾದನಬಾವಿ ಗ್ರಾಮದ ಲಲಿತಮ್ಮಅವರ ವಾಸದ ಮನೆಯ ಹಿಂಬದಿಯಗೋಡೆ ಭಾಗಶ: ಹಾನಿಯಾಗಿದೆ. ಕುಂಕುವ ಗ್ರಾಮದ ಸಾಕಮ್ಮಅವರ ಮನೆಯಗೋಡೆ ಕುಸಿದಿದೆ, ಕೊಡಚಗೊಂಡನಹಳ್ಳಿ ಗ್ರಾಮದ ಪರಮೇಶ್ವರಪ್ಪಅವರ ಮನೆಯ ಹಿಂಬದಿ ಗೋಡೆ ಕುಸಿದಿದೆ.ಗುಂಡಿ ಚಟ್ನಹಳ್ಳಿ ಗ್ರಾಮದ ಪ್ರೇಮಬಾಯಿಅವರು ೩೦ ಗುಂಟೆಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕಚ್ಚಿವೆ ಹಾಗೂ ಸುರಹೊನ್ನೆಗ್ರಾಮದ ನಾಗರಾಜಅವರ ಮನೆ ಹಾನಿಯಾಗಿದೆ.
ತೋಟಗಾರಿಕೆ ಕೃಷಿ ಅಧಿಕಾರಿ ಮತ್ತುಗ್ರಾಮಅಭಿವೃದ್ದಿ ಅಧಿಕಾರಿಗಳು ಸ್ಥಳ ಪರಿಶೀಲನೆ ಕೈಗೊಂಡಿದ್ದಾರೆ.