ನ್ಯಾಮತಿ ಮಕ್ಕಳ ರಕ್ಷಣೆಗಾಗಿ ವಿವಿಧ ಕಾನೂನುಗಳು ಜಾರಿಯಿದ್ದು, ಅವುಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದಿರಬೇಕುಎAದುಜಿಲ್ಲಾ ಮಕ್ಕಳ ರಕ್ಷಣಾಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಬಿ.ಎಸ್.ಪ್ರಕಾಶ ಸಲಹೆ ನೀಡಿದರು.
ಪಟ್ಟಣದವಿವೇಕಾನಂದ ಪ್ರೌಢಶಾಲೆಯಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಇಲಾಖೆ,ಜಿಲ್ಲಾ ಮಕ್ಕಳ ರಕ್ಷಣಾಘಟಕದ ವತಿಯಿಂದ ಬಾಲ್ಯ ವಿವಾಹ ನಿಷೇಧಕಾಯ್ದೆ, ಫೋಕ್ಸ್ಕಾಯ್ದೆ, ಮಕ್ಕಳ ಹಕ್ಕುಗಳ, ಶಿಕ್ಷಣದ ಮಹತ್ವಕುರಿತು ನಡೆದಅರಿವುಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಪರಿಹಾರ ಸೂಚಿಸಿದರು.
ಮುಖ್ಯ ಶಿಕ್ಷಕಿ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಮಲ್ಲೇಶಪ್ಪ, ಅಂಗನವಾಡಿ ಮೇಲ್ವಿಚಾರಕಿದಾಕ್ಷಾಯಿಣಿ ಪಾವಟೆ, ಅಂಗನವಾಡಿಕಾರ್ಯಕರ್ತೆಯರಾದ ಆಶಾಸೋಗಿ, ಗೀತಾ, ಸಲ್ಮಾಭಾನು ಉಪಸ್ಥಿತರಿದ್ದರು.