ದಾವಣಗೆರೆ,ಜುಲೈ.25 ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ.
2024 ರ ಜನವರಿಯಿಂದ ಜುಲೈ 23 ರ ವರೆಗಿನ 263 ಮಿ.ಮೀ ವಾಡಿಕೆಗೆ 371 ಮಿ.ಮೀ ಸರಾಸರಿ ಮಳೆಯಾಗಿದೆ. ತಾಲ್ಲೂಕುವಾರು ವಿವರದನ್ವಯ ಚನ್ನಗಿರಿ 352.8 ಮಿ.ಮೀ ವಾಡಿಕೆಗೆ 405.3, ದಾವಣಗೆರೆ 235.8 ಮಿ.ಮೀ ವಾಡಿಕೆಯಲ್ಲಿ 340.9, ಹರಿಹರ 255.1 ಮಿ.ಮೀ ವಾಡಿಕೆಗೆ 358.3, ಹೊನ್ನಾಳಿ 269.5 ವಾಡಿಕೆಗೆ 423.1, ಜಗಳೂರು 205 ಮಿ.ಮೀ ವಾಡಿಕೆಗೆ 279.2, ನ್ಯಾಮತಿ 374.6 ಮಿ.ಮೀ ವಾಡಿಕೆ ಮಳೆಗೆ 530 ಮಿ.ಮೀ ವಾಸ್ತವಿಕ ಮಳೆಯಾಗಿದೆ.
ಜೂನ್ ತಿಂಗಳಲ್ಲಿನ ಜಿಲ್ಲೆಯ 79 ಮಿ.ಮೀ ವಾಡಿಕೆಗೆ 76 ಮಿ.ಮೀ ಮಳೆಯಾಗಿದೆ. ಜುಲೈ ತಿಂಗಳಲ್ಲಿ 23 ರವರೆಗೆ 79 ಮಿ.ಮೀ ವಾಡಿಕೆಗೆ 150 ಮಿ.ಮೀ ಸರಾಸರಿ ಮಳೆಯಾಗಿದೆ.