ಗ್ರಾಮದತೀರ್ಥರಾಮೇಶ್ವರದತೀರ್ಥರಾಂಪುರ ಬಳಿ ರೈತರ ಜಮೀನುಗಳಿಗೆ ಮತ್ತುಕೆರೆಗೆ ಹೋಗುವ ರಸ್ತೆಯ ಸಮಸ್ಯೆ ಹಾಗೂ ಆಶ್ರಯಯೋಜನೆಯಡಿಯಲ್ಲಿ ನಿರ್ಮಿಸಿಕೊಂಡಿರುವ ಮನೆಗಳ ಸಮಸ್ಯೆಗಳ ಬಗ್ಗೆ ಶನಿವಾರ ಶಾಸಕ ಡಿ.ಜಿ.ಶಾಂತನಗೌಡ ಸ್ಥ¼ ಪರಿಶೀಲನೆ ನಡೆಸಿದರು.
ಆಶ್ರಯಯೋಜನೆಅಡಿಯಲ್ಲಿ ಸುಮಾರು 24 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, ವಿದ್ಯುತ್ ಸಂಪರ್ಕ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವಂತೆ ನಿವಾಸಿಗಳು ಮನವಿ ಮಾಡಿದರು ಹಾಗೂ ಹೊರವಲಯದ ಜಮೀನುಗಳಿಗೆ ಮತ್ತುಕೆರೆಗೆ ಹೋಗುವ ದಾರಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಮುಂದಿನ ದಿನಗಳಲ್ಲಿ ದಾರಿಕಲ್ಪಿಸುವಂತೆಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ರಾಜಸ್ವ ನಿರೀಕ್ಷಕ ವೃಷಭೇಂದ್ರಸ್ವಾಮಿ, ಗ್ರಾಮ ಆಡಳಿತ ಅಧಿಕಾರಿಜಿ.ರಾಘವೇಂದ ಹಾಗೂ ಗ್ರಾಮಸ್ಥರುಇದ್ದರು.