ನ್ಯಾಮತಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಕಾರ್ಯಾಲಯ ಫಲವನಹಳ್ಳಿ 2024 -25 ನೇ ಸಾಲಿನ ತ್ರೈಮಾಸಿಕ, ಕರ್ನಾಟಕ ಅಭಿವೃದ್ಧಿ 20 ಅಂಶ ಕಾರ್ಯಕ್ರಮ ಸೇರಿದಂತೆ ಕೆಡಿಪಿ ಸಭೆಯನ್ನ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆಡಿಪಿ ಮೀಟಿಂಗ್ ಪೂರ್ವ ನಿಯೋಜಿತವಾಗಿ 19 ಇಲಾಖೆಗೆ ಸಭೆಯಲ್ಲಿ ಭಾಗವಹಿಸಲಿಕ್ಕೆ ಪತ್ರ ಮುಖೇನ ತಿಳಿಸಿದ್ದರೂ ಸಹ ಕೇವಲ 6 ಇಲಾಖೆಯವರು ಭಾಗವಹಿಸಿದ್ದು ಅಧಿಕಾರಿಗಳ ನಿರ್ಲಕ್ಷ ಎದ್ದು ತೋರುತ್ತಿತ್ತು. ಕೆಡಿಪಿ ಮೀಟಿಂಗನಲ್ಲಿ ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಬಡವರ ಮನೆಗೆ ಕರೆಂಟ್ ನೀಡುವುದು, ಕುಡಿಯುವ ನೀರಿನ ಯೋಜನೆಗೆ ತಡೆರಹಿತ ವಿದ್ಯುತ್ ನೀಡುವ ಬಗ್ಗೆ ಬೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತೇವೆ ಎಂದರು. ಮುಸೇನಾಳ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ನಾಯ್ಕ್ ಸಭೆ ಕುರಿತು ಮಾತನಾಡಿ ಯಾವ ಅಧಿಕಾರಿಗಳು ಕೆಡಿಪಿ ಸಭೆಗೆ ಹಾಜರಿಲ್ವೋ ಅವರಿಗೆ ನೋಟಿಸ್ ಕೊಡುವಂತೆ ಸಭೆಯಲ್ಲಿ ತಾಯಿಸಿದರು. ಗ್ರಾಮದಲ್ಲಿರುವ ದೇವಸ್ಥಾನಗಳಿಗೆ ವಿದ್ಯುತ್ ಕೊಡುವ ಬಗ್ಗೆ ಬೆಸ್ಕಾಂ ಎಂಜಿನಿಯರಿಗೆ ಕೇಳಿದಾಗ ರಾಜ್ಯ ಸರ್ಕಾರವು ಪ್ರತಿಯೊಂದು ದೇವಸ್ಥಾನಕ್ಕೆ ಹಾಗೂ ಶಾಲೆಗಳಿಗೆ ವಿದ್ಯುತ್ ಕೊಡುವ ಬಗ್ಗೆ ಆದೇಶ ಮಾಡಿದೆ ಅದನ್ನು ಪಾಲಿಸುತ್ತೇವೆ ಎಂದು ತಿಳಿಸಿದರು. ಕೃಷಿ ಅಧಿಕಾರಿ ಮಂಜುನಾಥ್ ಕೆ ಡಿ ಪಿ ಸಭೆಯಲ್ಲಿ ಸರ್ವ ಸದಸ್ಯರ ಚರ್ಚೆಯ ವಿಷಯವಾಗಿ ಕೃಷಿಗೆ ಸಂಬಂಧಪಟ್ಟಂತೆ ಪಲವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಕೃಷಿಹೊಂಡ, ತೊಟ್ಟಿಲು ಗುಂಡಿ, ಬಧ ನಿರ್ಮಾಣ ಮಾಡಲಿಕ್ಕೆ ರೈತರು ಮುಂದೆ ಬಂದರೆ ಪಂಚಾಯಿತಿಯಿಂದ ಅನುಮೋದನೆ ಸಿಕ್ಕಲ್ಲಿ ಕ್ರಿಯಾಯೋಜನೆ ತಯಾರು ಮಾಡಿ ಪೂರ್ಣಗೊಳಿಸಲಾಗುವುದರ ಜೊತೆಗೆ, ದ್ವಿದಳ ಧಾನ್ಯ ಬೆಳೆಯಲು ರೈತರು ಮುಂದೆ ಬರಬೇಕು ಅದಕ್ಕೆ ಇಲಾಖೆಯ ಸಹಕಾರ ಇರುತ್ತದೆ ರೈತರು ಸದುಪಯೋಗಪಡಿಸಿಕೊಳ್ಳಿ ಎಂದರು. ತೋಟಗಾರಿಕೆ ಇಲಾಖೆಯ ಸಂಬಂಧಿಸಿದ ಅಡಿಕೆ ಬೆಳೆಗಾರರಿಗೆ 60% ಎನ್ ಆರ್ ಐ ಜಿ ಯಲ್ಲಿ ಹಣವನ್ನು ಪಡೆದು ಅಡಿಕೆ ತೋಟವನ್ನು ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.

ಪಶು ಇಲಾಖೆ ಕಾಮದೇನು ಯೋಜನೆ ಅಡಿಯಲ್ಲಿ ಹಸು, ಎಮ್ಮೆ, ಕುರಿ ಗಳಿಗೆ 6ರಿಂದ ಹತ್ತು ಸಾವಿರ ರೂಗಳವರೆ ಕೊಡಲಾಗುವುದು ಅದನ್ನು ಸದುಉಪಯೋಗಸಿಕೊಳ್ಳಿ ಎಂದರು. ಶಿಶು ಅಭಿವೃದ್ಧಿ ಇಲಾಖೆಯಿಂದ ಸಿಗುವಂತ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವ ಕುರಿತು ಅಧಿಕಾರಿ ಮಾಹಿತಿ ನೀಡಿದರು. ತಾಲೂಕ್ ಪಂಚಾಯತ್ ಇಲಾಖೆಗೆ ಸಂಬಂಧಪಟ್ಟ ಇಂಜಿನಿಯರ್ ದನದ ಕೊಟ್ಟಿಗೆ ನಿರ್ಮಾಣ, ಇನ್ನೂ ಹಲವಾರು ಯೋಜನೆಗಳಿಗೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಸಿದರೆ, ಕ್ರಿಯಾಯೋಜನೆ ತಯಾರು ಮಾಡಿ ಜಿಲ್ಲಾ ಪಂಚಾಯಿತಿ ಸಿ ಇ ಓಅವರಿಗೆ ಕಳುಹಿಸಿ ಅನುಮೋದನೆ ಪಡೆಯಲಾಗುವುದು ಎಂದುರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಕುಂತಲಾ ಬಾಯಿ, ಸದಸ್ಯರಾದ ಅನಿತ, ನಟರಾಜಪ್ಪ, ನಾಗೇಶ್ ನಾಯ್ಕ್, ಗೋವಿಂದರಾಜ್, ನೇತ್ರಮ್ಮ, ಪಿಡಿಓ ಜ್ಯೋತಿ ಶೆಟ್ಟಿ ಕೆಇಬಿ ಇಂಜಿನಿಯರ್ ವೆಂಕಟೇಶ್, ತೋಟಗಾರಿಕೆ ಇಲಾಖೆ ಅಧಿಕಾರಿ ಸತೀಶ್, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಸಂಬಂಧಪಟ್ಟ ಇಲಾಖೆ ವರ್ಗದವರು ಸಹ ಇದ್ದರು.

Leave a Reply

Your email address will not be published. Required fields are marked *