ದಾವಣಗೆರೆ ನಗರದ ಆದಿ ಕೇಶವ ಅಕಾಡೆಮಿ ಅಸೋಸಿಯೇಟೆಡ್ ವಿತ್ ಎಂ ಈ ಎಸ್ ಪಿಯು ಕಾಲೇಜು ಮತ್ತು ಶಾಹಿದ್ ಫಾಲ್ಕಾನ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ‘ ಆರಂಬ – 2024 ಫ್ರೆಷರ್ಸ್ ಡೇ’ ಎಂಬ ಶೈಕ್ಷಣಿಕ ವರ್ಷದ ಸ್ವಾಗತ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಆದಿ ಕೇಶವ ಅಕಾಡೆಮಿಯ ಕಾರ್ಯದರ್ಶಿಗಳಾದ ಜ್ಯೋತಿ ಕುಮಾರ್ ರವರು ನೆರವೇರಿಸಿ ಕೊಟ್ಟರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಾವಣಗೆರೆ ನಗರ ಪಾಲಿಕೆಯ ಮಾಜಿ ಮೇಯರ್ ಮತ್ತು ಕಾರ್ಪೊರೇಟರ್ ಶ್ರೀಯುತ ಅಜಯ್ ಕುಮಾರ್ ಬಿ ಜಿ ರವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ಅವರ ಕನಸುಗಳನ್ನು ನನಸಾಗಿಸಬೇಕು ಎಂದು ಮುಖ್ಯ ಅತಿಥಿಗಳ ಭಾಷಣವನ್ನಾಡಿದರು. ಕಾರ್ಯಕ್ರಮಕ್ಕೆ ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಮೋಟಿವೇಷನಲ್ ಸ್ಪೀಕರ್ ಎಂದೇ ಖ್ಯಾತಿಯಾಗಿರುವ ಡಾ. ವೆಂಕಟೇಶ್ ಬಾಬು ಎಸ್ ರವರು ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ, ನಂಬಿಕೆ, ಗುರಿಯನ್ನು ಹೇಗೆ ಸಾಧಿಸಬೇಕು
ದೃಢ ಪ್ರಯತ್ನದಿಂದಲೇ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಕರುಣಾಕರನ್ ನಿವೃತ್ತ ಪ್ರಾಂಶುಪಾಲರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಥಮ ದರ್ಜೆ ಕಾಲೇಜು ಹರಿಹರ ಗಳನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧಿಕೇಶವ ಅಕಾಡೆಮಿಯ ನಿರ್ದೇಶಕರಾದ ಧನರಾಜ್ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಹಿನ್ ಫಾಲ್ಕನ್ ಕಾಲೇಜಿನ ಅಧ್ಯಕ್ಷರಾದ ದಾದಾಪೀರ್ ರವರು, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ರವರು, ಆದಿಕೇಶವ ಅಕಾಡೆಮಿಯ ನಿರ್ದೇಶಕರಾದ ಬಲ್ಲೂರು ಬಸವರಾಜ್, ಎಂಸಿ ಸುಜಾತ, ಮಲ್ಲೇಶಪ್ಪ , ಪವನ್ , ಮತ್ತು ಎಂಇಎಸ್ ಕಾಲೇಜಿನ ನಿರ್ದೇಶಕರಾದ ಪ್ರದೀಪ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಸತೀಶ್, ಮಲ್ಲೇಶ್ ಎಂ ನಾಯ್ಕ, ಅನಿಲ್, ನಿರಂಜನ್, ರಾಜೇಶ್, ದಸ್ತಗಿರ, ನಾಗರಾಜ ,ಆಶಾ ,ಮೋನಿಕಾ, ಕೋಮಲ, ಮೇಘನ, ಶಿವಾನಿ, ಜ್ಯೋತಿ ,ಭಾಗ್ಯ ಶುಭ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಸ್ವಾಗತ ಕಾರ್ಯಕ್ರಮವು ಬಹಳಷ್ಟು ವಿಜೃಂಭಣೆಯಿಂದ ಸಾಂಸ್ಕೃತಿಕವಾಗಿ ನೃತ್ಯ ಹಾಡು ಮತ್ತು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮಗಳಲ್ಲಿ ಎಲ್ಲಾ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
ನಿರೂಪಣೆಯನ್ನು ವಿದ್ಯಾರ್ಥಿಗಳಾದ ಭೂಮಿಕಾ ಮತ್ತು ಅನ್ನಪೂರ್ಣ ನೆರವೇರಿಸಿಕೊಟ್ಟರು.