ನ್ಯಾಮತಿ:
ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ಷಮತೆಯನ್ನು ಹೊರತರಲು ನಿರಂತರ ಸಾಧನೆ ಮಾಡಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ ಹೇಳಿದರು.
ಪಟ್ಟಣದ ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ದಿಗಾಗಿ ರಚನೆಯಾಗಿರುವ ಗುರುಶಿಷ್ಯರ ಸಂಗಮ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್‍ನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿ ಜೀವನದಲ್ಲಿ ಮುಂದೆ ಬರಬೇಕಾದರೆ ಗುರುವಿನ ಅವಶ್ಯಕತೆ ಇದೆ.ಪ್ರತಿಯೊಬರು ವಿಷಯವನ್ನು ತಿಳಿದುಕೊಂಡಿರುತ್ತಾರೆ. ಹೆಚ್ಚಿನ ವಿಷಯವನ್ನು ಹೊರತರಲು ಗುರು ಫೆನಲ್‍ನಂತೆ ಮಾರ್ಗದರ್ಶನ ನೀಡುತ್ತಾರೆ ಎಂದರು.
ಪ್ರತಿಯೊಬ್ಬರಲ್ಲಿ ಐದು ಪಂಚೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಕಾರ್ಯ ನಿರ್ವಹಿಸುತ್ತವೆ. ಪ್ರಪಂಚದಲ್ಲಿ ನಡೆಯುವ ಚಟುವಟಿಕೆಗಳನ್ನು ತಿಳಿಯಲು ಬುದ್ದಿ ಸಹಾಯವಾಗುತ್ತದೆ.ಮನುಷ್ಯನಲ್ಲಿ ಆಗಾಧವಾದ ಶಕ್ತಿ ಇದೆ.ತನಗೆ ಸಿಕ್ಕಿರುವ ಬುದ್ದಿಯಿಂದ, ಕುತೂಹಲದಿಂದ ವಿಜ್ಞಾನ ಲೋಕದಲ್ಲಿ ಹೊಸ,ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುತ್ತಿದ್ದಾರೆ. ಇಂದು ಬಾಹ್ಯಾಕಾಶದಲ್ಲಿ 60 ಉಪಗ್ರಹಗಳು ಕೆಲಸ ಮಾಡುತ್ತಿವೆ ಎಂದರು.
ಬಾಹ್ಯಾಕಶದಲ್ಲಿ ಸಾಧನೆ ಮಾಡಿದ ಕಲ್ಪನಾ ಚಾವ್ಲಾ, ಸುನಿತಾ ವಿಲಿಯ್ಸಂ ಅವರಂತೆ ಇಂದಿನ ವಿದ್ಯಾರ್ಥಿಗಳು ಸಾಧನೆಗೆ ಪ್ರಯತ್ನಿಸುವಂತೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕುತೂಹಲಕಾರಿ ವಿಷಯಗಳಿಗೆ ಉತ್ತರ ನೀಡುವ ಮೂಲಕ ಸಂವಾದ ನಡೆಸಿದರು.
ವಿಶ್ರಾಂತ ಉಪಕುಲಪತಿ ಕೆ.ಸಿದ್ದಪ್ಪ ಅವರು ಮಾತನಾಡಿ, ಹೊಸ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಂಡು ಈಗಾಗಲೇ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಾಧನೆ ಈಗಿನ ವಿದ್ಯಾರ್ಥಿಗಳು ಮಾಡಬೇಕು. ಹಳೆಯ ವಿದ್ಯಾರ್ಥಿಗಳು ತಾವು ಓದಿರುವ ಶಾಲೆಗಳ ಅಭಿವೃದ್ದಿಗೆ ಕಂಕಣಬದ್ದರಾಗಬೇಕು. ಈ ನಿಟ್ಟಿನಲ್ಲಿ ರಚನೆಯಾಗಿರುವ ಟ್ರಸ್ಟ್‍ ಉತ್ತಮ ಕೆಲಸ ಮಾಡಲಿ ಎಂದರು.
ಮನುಷ್ಯ ಮನಸ್ಸು ಮಾಡಿದರೆ ಅಸಾಧ್ಯ ಎಂಬುದು ಇಲ್ಲ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು, ಸಾಧಿಸುವ ಸಾಮಾಥ್ರ್ಯ ನನಗಿದೆ ಎಂದು ಹೊರಟರೆ ಎತ್ತರಕ್ಕೆ ಬೆಳೆಯಬಹುದು. ಮನುಷ್ಯ ಸೋಲು ಅನುಭವಿಸಬಾರದು ಅಂದರೆ ತಾನು ಬದುಕಿ ಬೇರೆಯವರು ಬದುಕಬೇಕು ಎಂಬ ಮನೋಭಾವ ಬೆಳಸಿಕೊಳ್ಳಬೇಕು ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಟ್ರಸ್ಟ್‍ನ ಅಧ್ಯಕ್ಷಡಿ.ತೀರ್ಥಲಿಂಗಪ್ಪಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ರುದ್ರಪ್ಪಗೌಡ, ಬಿ.ಎಂ.ರೇಣುಕಯ್ಯ, ಸಿದ್ದೇಶಪ್ಪ ಜಿಗಣಪ್ಪರ, ಎಸ್.ಆರ್.ಬಸವರಾಜಪ್ಪ ಹಾಗೂ ಟ್ರಸ್ಟ್‍ನ ಸದಸ್ಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *