ನ್ಯಾಮತಿ: ಸಮೀಪದ ಸುರವೂನ್ನೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಡೆಮನೆ ದೀವಿತ ಟ್ರಸ್ಟ್ ಬೆಂಗಳೂರು ಸುರುವೂನ್ನೇ ಇವರ ವತಿಯಿಂದ ಬಡ ಮಕ್ಕಳಿಗೆ ಪೆನ್ನು, ಪೆನ್ಸಿಲ್, ಬುಕ್ಸ್ ,ವೆಂಡರ್, ಸ್ಕೇಲ್, ರಬ್ಬರ್ ಸೇರಿದಂತೆ ಇನ್ನು ಮುಂತಾದ ಹಲವಾರು ಬಡ ವಿದ್ಯಾರ್ಥಿಗಳಿಗೆ ಬುಕ್ಸ್ ಉಚಿತವಾಗಿ ವಿತರಿಸಲಲಾಯಿತು.
ಬೆಂಗಳೂರು ಕಡೇಮನೆ ದೀವಿತ ಟ್ರಸ್ಟನ ಅಧ್ಯಕ್ಷ ತೀರ್ಥಪ್ಪ ಕಡೆಮನೆ ಬಡ ವಿದ್ಯಾರ್ಥಿಗಳಿಗೆ ಬುಕ್ಸ್ ವಿತರಣೆ ಮಾಡಿ ನಂತರ ಮಾತನಾಡಿದ ಅವರು ನನ್ನ ಜೇಷ್ಠ ಪುತ್ರ ದೀವಿತ ಹತ್ತು ವರ್ಷಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿದ್ದರು. ಅವರ ಸ್ಮರಣಾರ್ಥವಾಗಿ ಶಾಂತಿನಗರದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್ಲಾ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನ ಉತ್ತೇಜಿಸುವ ಹಿನ್ನೆಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀಡುತ್ತಿದ್ದೇವೆ. ಇದರ ಜೊತೆಗೆ ಸುಮಾರು 8 ಜಿಲ್ಲೆಗಳಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ, ಇಂಜಿನಿಯರಿಂಗ್, ಎಂಬಿಬಿಎಸ್ ಮಾಡುವಂತಹ ಬಡ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ 5000ರೂ ದನ ಸಹಾಯವನ್ನು ನೀಡಿ ಸುಮಾರು 8 ಲಕ್ಷ ರೂ ಹಣವನ್ನು ನೀಡಿ ಶಿಕ್ಷಣಕ್ಕೆ ಸದ್ವಿ ನಿಯೋಗ ಮಾಡುತ್ತಿದ್ದೇನೆ ಎಂದುರು. ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್, ಮೋಟಿವೇಟರ್ ಸಾವಿತ್ರಮ್ಮ, ಕಡೆಮನೆ ಜೀವಿತ ಟ್ರಸ್ಟಿನ ಉಪಾಧ್ಯಕ್ಷ ಯಶೋದಮ್ಮ, ವೇದಮೂರ್ತಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸಹ ಶಿಕ್ಷಕರು ಭಾಗವಹಿಸಿದ್ದರು.