ನ್ಯಾಮತಿ: ತಾಲೂಕು ಗೋವಿನಕೋವಿ ಗ್ರಾಮ ಪಂಚಾಯತಿ ವತಿಯಿಂದ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಧ್ಯಕ್ಷರಾದ ದಾನೇಶಪ್ಪನವರು ಧ್ವಜಾರೋಹಣವನ್ನು ನೆರವೇರಿಸಿ 2023-24ನೇ ಸಾಲಿನ ಗೋವಿನಕೋವಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 570 ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಶಶಿ ಎನ್ ರವರಿಗೆ ಗ್ರಾಮ ಪಂಚಾಯಿತಿ ವತಿಯಿಂದ 10,000 ರೂ ಚೆಕ್ ನೀಡುವುದರ ಮೂಲಕ ಸನ್ಮಾನಿಸಲಾಯಿತು. ಗ್ರಾ ಪಂ ಉಪಾಧ್ಯಕ್ಷ ಶಶಿಕಲಾ, ಪಿಡಿಒ ಸತೀಶ್, ವಿ ಎಚ್ ರುದ್ರೇಶ್, ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು ,ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಸಹ ಭಾಗವಹಿಸಿದ್ದರು.