ದಾವಣಗೆರೆ; ಆ.17 ; ರಾಷ್ಟ್ರೀಯ ಆಯುμï ಅಭಿಯಾನದಡಿಯಲ್ಲಿ ಜಿಲ್ಲಾ ಆಯುμï ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಹಳೆಕಡ್ಲೇಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಯುರ್ವಿದ್ಯಾ ಶಾಲಾ ಮಕ್ಕಳಿಗೆ ಆಯುಷ್ ಪದ್ಧತಿಗಳ ಮೂಲಕ ಆರೋಗ್ಯ ಜೀವನ ಶೈಲಿಯ ಶಿಕ್ಷಣ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆಯುμï ಅಧಿಕಾರಿಗಳಾದ ಡಾ. ಯೋಗೇಂದ್ರಕುಮಾರ್. ಬಿ.ಯು. ಅವರು ಆಯುರ್ವಿದ್ಯಾಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ 5 ಜಿಲ್ಲೆಗಳಿಗೆ ಈ ಕಾರ್ಯಕ್ರಮ ನಿಗದಿಪಡಿಸಿದ್ದು ಜಿಲ್ಲೆಯ ಆಯ್ದ 60 ಶಾಲೆಗಳಲ್ಲಿ ಆಯುರ್ವಿದ್ಯಾವನ್ನು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾಗುವುದು. ಮತ್ತು ಆಯುμï ವೈದ್ಯರು ಮತ್ತು ಆಯುರ್ವಿದ್ಯಾ ಕಾರ್ಯಕ್ರಮದ ವೈದ್ಯರನ್ನೊಳಗೊಂಡ ತಂಡವು ಶಾಲೆಗಳಿಗೆ ಭೇಟಿ ನೀಡಿ ಆಯುμï ವೈದ್ಯ ಪದ್ದತಿಗಳ ಬಗ್ಗೆ ಜಾಗೃತಿ ಮೂಡಿಸಿ ನಂತರ ಕರಪತ್ರ ವಿತರಣೆ ಹಾಗೂ ಔಷಧಿ ಸಸ್ಯಗಳ ವಿತರಣೆಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದೆಂದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಕಿಶೋರಿ ಕೆ.ಎಸ್. ರವರು ಔಷಧಿ ಸಸ್ಯಗಳ ಮಾಹಿತಿ ನೀಡಿದರು.
ಆಯುರ್ವಿದ್ಯಾ ವೈದ್ಯರಾದ ಡಾ.ವಿನುತಾ ಸಿ.ಕೆ ರವರು ವಿದ್ಯಾರ್ಥಿಗಳ ದಿನಚರಿ, ಆಹಾರ ಮತ್ತು ಆರೋಗ್ಯದ ವಿಷಯ ಕುರಿತು ಉಪನ್ಯಾಸ ನೀಡಿದರು. ನಂತರ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿತರಿಸಿ ಮಕ್ಕಳಲ್ಲಿ ಆಯುμï ವೈದ್ಯ ಪದ್ದತಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲಾಯಿತು. ಶಾಲೆಯ ಶಿಕ್ಷಕರಾದ ಸುರೇಶ್ ಜೆ. ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ದೇಶ್ ಈ. ಬಿಸನಳ್ಳಿ ರವರು ಆಯುμï ಪರಿಚಯ ಕುರಿತು ತಿಳಿಸಿದರು.