ನ್ಯಾಮತಿ:ಮುಂಬರುವ ಗೌರಿಗಣೇಶ ಹಬ್ಬದಲ್ಲಿ ಜಾನಪದ ಕಲಾವಿದರಿಗೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜಾನಪದ ಕಲೆಯನ್ನು ಉಳಿಸುವಂತೆ ದಾವಣಗೆರೆ ಜಿಲ್ಲಾ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ರುದ್ರಪ್ಪಎಸ್.ಉಜ್ಜಿನಿಕೊಪ್ಪ ಮನವಿ ಮಾಡಿದರು.
ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಮಂಗಳವಾರ ನ್ಯಾಮತಿ ಪೊಲೀಸ್‍ಠಾಣೆಆಯೋಜಿಸಿದ್ದ ಗೌರಿಗಣೇಶಹಬ್ಬ ಹಾಗೂ ಈದ್‍ಮಿಲಾದ್ ಹಬ್ಬದಕುರಿತು ನಡೆದ ಸಾರ್ವಜನಿಕ ಶಾಂತಿ ಸೌಹಾರ್ಧ ಸಭೆಯಲ್ಲಿಅವರು ಮಾತನಾಡಿದರು.
ಗಣಪತಿ ಪ್ರತಿಷ್ಠಾಪಿಸುವವರು ಕಾನೂನು ಪಾಲನೆ ಮಾಡಬೇಕು.ಅಗ್ನಶಾಮಕ, ಪಟ್ಟಣಪಂಚಾಯಿತಿ, ಬೆಸ್ಕಾಂ ಮತ್ತು ಪೊಲೀಸ್‍ಇಲಾಖೆಯಅನುಮತಿ ಪಡೆಯುವುದುಕಡ್ಡಾಯ, ಪೊಲೀಸ್‍ಠಾಣೆಯಲ್ಲಿಏಕಗವಾಕ್ಷಿ ಪದ್ದತಿ ಮಾಡಲಾಗುವುದು. ಸಂಘ ಸಂಸ್ಥೆಗಳು ಪರಿಸರಸ್ನೇಹಿ ಮಣ್ಣಿನಗಣಪತಿ ಪ್ರತಿಷ್ಠಾಪಿಸಿ, ಪಾಶ್ಚಾತ್ಯ ಸಂಗೀತ(ಡಿಜಿ)ಕ್ಕೆ ಹಣವನ್ನು ವ್ಯಯಮಾಡಬೇಡಿಎಂದು ಸಲಹೆ ನೀಡಿದರು.
ಸಾರ್ವಜನಿಕಗಣಪತಿ ಪ್ರತಿಷ್ಠಾಪಿಸುವವರು ಬೆಂಕಿ,ವಿದ್ಯುತ್, ಷಾಮಯಾನ ಅವÀWಡಗಳು ಸಂಭವಿಸದಂತೆ, ಪಾಳಿಯ ರೀತಿಯಲ್ಲಿ ಪೆಂಡಾಲ್‍ನ್ನುಕಾಯಬೇಕು, ಸಿಸಿಟಿವಿ ಅಳವಡಿಸಿ, ಗಣಪತಿ ವಿಸರ್ಜನೆ ಬಗ್ಗೆ ಮುಂಜಾಗ್ರತೆಯಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಪೊಲೀಸ್‍ಇನ್ಸ್‍ಪೆಕ್ಟರ್‍ಎನ್.ಎಸ್.ರವಿ ಮಾಹಿತಿ ನೀಡಿದರು.
ಸಾರ್ವಜನಿಕರ ಪರವಾಗಿದೂದ್ಯಾನಾಯ್ಕ, ಹೊಸಮನೆ ಮಲ್ಲಿಕಾರ್ಜುನ, ಯುನೂಷ್ ಪಾಷ, ಟಿ.ಎನ್.ವಿರೇಶ, ಲೋಕನಾಯ್ಕಅವರು ಮಾತನಾಡಿ, ಹಿಂದೂ ಮುಸ್ಲಿಂ ಬಾಂಧವರು ಸೌಹಾರ್ಧ ಹಬ್ಬಆಚರಣೆ ಮಾಡಿಕೊಂಡು ಬಂದಿರುವ ಬಗ್ಗೆ ತಿಳಿಸಿದರು.
ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ ಅಧ್ಯಕ್ಷತೆವಹಿಸಿದ್ದರು. ಸಬ್‍ಇನ್ಸ್‍ಪೆಕ್ಟರ್ ಬಿ.ಎಲ್. ಜಯಪ್ಪನಾಯ್ಕ ಉಪಸ್ಥಿತರಿದ್ದರು.