ದಾವಣಗೆರೆ, ಆ.21; ಪ್ರವಾಸೋದ್ಯಮವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಹಾಗೂ ಎಲ್ಲಾ ವರ್ಗಗಳ ಅಂದರೆ, ಧಾರ್ಮಿಕ, ಸಾಂಸ್ಕøತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿಗೆ ದೇಖೋ ಅಪನಾ ದೇಶ್ ಜನರ ಆಯ್ಕೆ-2024 ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
    ಈ ಕಾರ್ಯಕ್ರಮದ ಭಾಗವಾಗಿ ನಾಗರಿಕರು, ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು  Mygov     ವೇದಿಕೆಯಡಿಯಲ್ಲಿ ವೆಬ್‍ಲಿಂಕ್-  https://innovateindia.mygov.in/dekho-apna-desh/    ಲಾಗಿನ್‍ನಲ್ಲಿ ನಾಗರಿಕರು, ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು 15ನೇ ಸೆಪ್ಟೆಂಬರ್ 2024ರವರೆಗೆ ವೋಟ್ ಮಾಡುವ ಮೂಲಕ ಅವಕಾಶ ನೀಡಲಾಗಿರುತ್ತದೆ. ಆಯ್ಕೆ ನಂತರ ಪ್ರಶಂಸನಾ ಪ್ರಮಾಣ ಪತ್ರವನ್ನು ಆನ್‍ಲೈನ್‍ನಲ್ಲಿಯೇ ಪಡೆಯಬಹುದು.
     ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಹರಿಹರೇಶ್ವರ ದೇವಸ್ಥಾನ, , ಕೊಂಡಜ್ಜಿ ಕೆರೆ, ಕುಂದುವಾಡ ಕೆರೆ, ಇಂದಿರಾ ಪ್ರಿಯಾದರ್ಶಿನಿ ಪ್ರಾಣಿ ಸಂಗ್ರಹಾಲಯ, ಕಣ್ವಕುಪ್ಪೆ ಕೋಟೆ, ಚನ್ನಗಿರಿ ಕೋಟೆ, ಮದಕರಿ ನಾಯಕ ಸಮಾಧಿ ಸ್ಥಳ ಮಾಯಕೊಂಡ ಪ್ರವಾಸಿ ತಾಣಗಳನ್ನು ಆಯ್ಕೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಹೀಗಾಗಿ ಪ್ರವಾಸಿ ತಾಣಗಳನ್ನು ಆಯ್ಕೆಮಾಡಿ, ವೋಟ್ ಮಾಡುವಂತೆ ದಾವಣಗೆರೆ ಜನತೆಯಲ್ಲಿ ಕೋರಲಾಗಿದೆ.
    ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ದೂ.ಸಂ:08192-230123 ಗೆ  ಸಂಪರ್ಕಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *