ಹೊನ್ನಾಳಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕೇಂದ್ರ ವಲಯದ ಪ್ರೌಢ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಸಂಸ್ಕೃತಿ 3000, 1500 ಹಾಗೂ 800 ಮೀಟರ್ ಓಟ ಈ ಮೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ವೀರಾಗ್ರಣಿ ಪ್ರಶಸ್ತಿಯೊಂದಿಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆರುಂಧತಿ ಆರ್.ಪಿ 400 ಮೀಟರ್ ಓಟದಲ್ಲಿ ದ್ವಿತೀಯ, 10ನೇ ತರಗತಿ ಆದಿತ್ಯ 200 ಮೀ.ಓಟದಲ್ಲಿ ಪ್ರಥಮ, 4×100 ಬಾಲಕಿಯರ ರಿಲೇ ದ್ವಿತೀಯ, 4×400 ಬಾಲಕಿಯರ ರಿಲೇ ಪ್ರಥಮ, 4×100 ಬಾಲಕರ ರಿಲೇ ತೃತೀಯ, ಜಾವ್ಲಿನ್ ಥ್ರೋದಲ್ಲಿ 10 ನೇ ತರಗತಿ ವಿದ್ಯಾರ್ಥಿ ಮಾರುತಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಬಾಲಕರ ಕಬ್ಬಡಿಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಆನಂದ್ ಕುಮಾರ್ ತಿಳಿಸಿರುತ್ತಾರೆ.
ತಾಲ್ಲೂಕು ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಅಭಿನಂದಿಸಿದರು.