ಸಾಸ್ಟೆಹಳ್ಳಿ: ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮದ 60 ವರ್ಷ ಮಹಿಳೆ ಮೃತಪಟ್ಟಿದ್ದು, ಅನೇಕರು ವಾಂತಿಭೇದಿಯಿಂದ ನರಾಳಾಡು ತ್ತಿದ್ದರು. ಈ ಸಮಸ್ಯೆ ಪರಿಹಾರವಾಗಿ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು, ಒದಗಿಸುವಲ್ಲಿ ವಿಫಲರಾದ ಪಿಡಿಒ ಪರಮೇಶ್ ಕೊಳ್ಳೂರ್ರನ್ನು ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಮಂಗಳವಾರ ಅಮಾನತು ಗೊಳಿಸಿ ಆದೇಶಿಸಿದ್ದಾರೆ.
ಚರಂಡಿ ನೀರು ಹಾಗೂ ಕೊಳಚೆ ನೀರು ಕುಡಿಯುವ ನೀರಿನ ಪೈಪ್ ಲೈನ್ ಸೇರಿಕೊಳ್ಳುತ್ತಿದ್ದರಿಂದ ಇದನ್ನು ಕುಡಿದ ಗ್ರಾಮಸ್ಥರು ವಾಂತಿಭೇದಿಗೆ ತುತ್ತಾಗಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊನ್ನಾಳಿ ಇವರ ವರದಿಯಲ್ಲಿ ತಿಳಿಸಿರುವಂತೆ ಕುಡಿಯುವ ನೀರಿನ ಬೋರ್ವೆ ಲ್ ಹತ್ತಿರ ಮಳೆಯ ನೀರು 3 ತಿಂಗಳಿಂದ ನಿಂತಿರುವುದು. ಎ.ಕೆ ಕಾಲೋನಿಯ ಮುಖ್ಯ ರಸ್ತೆಯಲ್ಲಿ ಎರಡು ಮುಖ್ಯ ಪೈಪ್ ಲೈನ್ಗಳು ಕೊಳಚೆ ನೀರಿನಲ್ಲಿ ಹಾದು ಹೋಗಿವೆ.ಶುದ್ಧ ಕುಡಿವ ನೀರಿನ ಘಟಕದ ಟ್ಯಾಂಕ್ ದುರಸ್ಥಿ ಸ್ವಚ್ಛಗೊಳಿಸಲು ಕ್ರಮಕೈಗೊಂಡಿ ರುವುದಿಲ್ಲ ಎಂಬ ವರದಿ ಅವಲೋಕಿಸಿ ಹುಣಸಘ ಟ್ಟದ ಪಿಡಿಒ ಪರಮೇಶ್ ಕೊಳ್ಳೂರ್ ಅಮಾನತ್ತು ಮಾಡಿ ಆದೇಶಿಸಿದ್ದಾರೆ.