???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ನ್ಯಾಮತಿ:ತಾಲ್ಲೂಕಿನ ಚೀಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾನೂನು ಬಾಹಿರವಾಗಿ ಐವರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ತಡೆಯುವಂತೆ ಷೇರುದಾರರು ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಚೀಲೂರು ಘಟಕದ ಅಧ್ಯಕ್ಷ ಕರಿಬಸಪ್ಪ ಅಂಗಡೇರ ಮಾತನಾಡಿ, ಪ್ರಸ್ತುತ ಆಡಳಿತ ಮಂಡಳಿ ನೋಟಿಫೀಕೇಶನ್ ಹೊರಡಿಸಿದ್ದು ಇದರ ಬಗ್ಗೆ ದಾವಣಗೆರೆ ಸಹಕಾರ ಸಂಘಗಳ ಉಪನಿಬಂಧಕರು ಕೂಡಲೇ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ, ಸಹಕಾರ ಸಂಘದ ಆಡಳಿತ ಮಂಡಳಿ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳುವುದರ ಜೊತೆಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು.
ಆಡಳಿತ ಮಂಡಳಿ ಅಧಿಕಾರ ಡಿಸೆಂಬರ್ 2024 ಅವಧಿ ಕೊನೆಗೊಳ್ಳಲಿದೆ. ಚುನಾವಣೆ ಆಯೋಗದ ಆದೇಶದ ಪ್ರಕಾರ ಹೊಸದಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಂತಿಲ್ಲ, ಆದರೂ ಆಡಳಿತ ಮಂಡಳಿ ಈ ಆದೇಶವನ್ನು ನಿರ್ಲಕ್ಷಿಸಿ ಸಿಬ್ಬಂದಿಗಳ ನೇಮಕಾತಿಗೆ ನೋಟಿಫಿಕೇಶನ್ ಹೊರಡಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಹಾಯಕ ನಿಬಂಧಕರು ದಾವಣಗೆರೆ ಇವರು ಏಪ್ರಿಲ್ 2022 ರಂದು ಈ ಆಡಳಿತ ಮಂಡಳಿಯನ್ನು 6 ತಿಂಗಳವರೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು, ಈ ಆದೇಶದ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದು, ಈ ಅವಧಿಯಲ್ಲಿ ಮಾರ್ಚ್ 1 2024 ರಂದು ಆಡಳಿತ ಮಂಡಳಿ ಸಭೆ ಸೇರಿ ಸಿಬ್ಬಂದಿಗಳ ನೇಮಕಾತಿಗೆ ಆರ್‍ಸಿಎಸ್ ಅನುಮತಿ ಪಡೆದುಕೊಂಡಿದ್ದಾರೆ. ಚುನಾವಣೆ ಸಮೀಪಿಸಿದ ಸಂದರ್ಭದಲ್ಲಿ ಹಣ ಮಾಡಿಕೊಳ್ಳುವ ದುರುದ್ದೇಶದಿಂದ ಸಿಬ್ಬಂದಿಗಳ ನೇಮಕಾತಿಗೆ ತರಾತುರಿಯ ನಿರ್ಧಾರ ಕೈಗೊಂಡಿರುತ್ತಾರೆ. ಅಲ್ಲದೇ ಈ ವಿಷಯ ಸ್ಥಳೀಯವಾಗಿ ಬೆಳಕಿಗೆ ಬಾರದಂತೆ ಶಿವಮೊಗ್ಗದ ಸ್ಥಳೀಯ ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟಣೆ ಹೊರಡಿಸಿದ್ದಾರೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಎನ್. ಗಿರೀಶ್ ಆರೋಪಿಸಿದರು.
ಈ ಸಂಘದಲ್ಲಿ ಒಂದು ದಶಕದಿಂದ ಸೇವೆ ಸಲ್ಲಿಸುತ್ತಿರುವ ಅನುಭವ ಹೊಂದಿದ ಐವರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು, ಆದರೆ ಈಗಿನ ಆಡಳಿತ ಮಂಡಳಿ ಸೇವೆ ಸಲ್ಲಿಸಿದವರನ್ನು ಕೈಬಿಟ್ಟು, ಆಮಿಷಕ್ಕೊಳಗಾಗಿ ಹೊಸಬರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಡಿ.ಆರ್. ಮತ್ತು ಎಆರ್ ಅವರುಗಳು ಸಂಘಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಆಡಳಿತ ಮಂಡಳಿ ತೆಗೆದುಕೊಂಡಿರುವ ತೀರ್ಮಾನಗಳ ವಿರುದ್ಧ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಸಂಘದ ಕಚೇರಿಗೆ ಬೀಗ ಹಾಕಲಾಗುವುದು, ಮತ್ತು 7 ಗ್ರಾಮಗಳ ಶೇರುದಾರರೊಂದಿಗೆ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದÀು ಕರಿಬಸಪ್ಪ ಮತ್ತು ಸಿ.ಎಲ್. ಸತೀಶ್ ಹೇಳಿದರು.
ಬಿಜೆಪಿ ಮುಖಂಡ ಡಿ.ಜಿ.ರಾಜಪ್ಪ, ಸಿ.ಎಲ್. ಸತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಜಿ. ಸೋಮಶೇಖರ, ಗ್ರಾ.ಪಂ. ಸದಸ್ಯರಾದ ಚನ್ನಯ್ಯ, ಹಾಲೇಶಪ್ಪ, ತೆಗ್ಗಿಹಳ್ಳಿ ನಾಗರಾಜ್, ಮಹೇಂದ್ರ, ವಿಎಸ್‍ಎಸ್‍ಎನ್ ಮಾಜಿ ಸದಸ್ಯ ಬಸವರಾಜ ಇದ್ದರು.

Leave a Reply

Your email address will not be published. Required fields are marked *