ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾವತಿಯಿಂದ ದಾವಣಗೆರೆ ಜಿಲ್ಲೆ ಚನ್ನಗಿರಿತಾ|| ಕೆರೆಬಿಳಚಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂAಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕÀರಾಗಿ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಕೆಳಕಂಡ ವಿಷಯಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಭೋದಿಸಲು ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಸೆ.10 ರೊಳಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಹಾಗೂ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ಪದವಿ ಪೂರ್ವಕಾಲೇಜು, ಕೆರೆಬಿಳಚಿ ಗ್ರಾಮ ಚನ್ನಗಿರಿ ತಾ|| ಇಲ್ಲಿ ಸಲ್ಲಿಸಬಹದು.
ಕನ್ನಡ ಶಿಕ್ಷಕರು, ಇಂಗ್ಲೀಷ್ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎ, ಬಿ.ಎಡ್, ಗಣಿತ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎಸ್ಸಿ, ಬಿ.ಎಡ್, ಸಾಮಾನ್ಯ ವಿಜ್ಞಾನ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎಸ್ಸಿ, ಬಿ.ಎಡ್, ಸಮಾಜ ವಿಜ್ಞಾನ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎ, ಬಿ.ಎಡ್ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ : 08192-250022, 9483075634 ಸಂಪರ್ಕಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.