ನ್ಯಾಮತಿ ಪಟ್ಟಣ ಸುರುವೂನ್ನೇ, ಗಂಜೀನಹಳ್ಳಿ, ಚಟ್ನಹಳ್ಳಿ, ಗ್ರಾಮಗಳಲ್ಲಿ ಕಳೆದ ಜುಲೈ, ಆಗಸ್ಟ್ ತಿಂಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು. ನ್ಯಾಮತಿ ಪೊಲೀಸ್ ಇಲಾಖೆಯು ಕಾರ್ಯಾಚರಣೆ ನಡೆಸಿ, ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚನ್ನಗಿರಿ ಡಿ ಓ ಎಸ್ ಪಿ ರುದ್ರಪ್ಪ ಎಸ್ ಉಜ್ಜನಕೊಪ್ಪರವರು ತಿಳಿಸಿದರು.
ಸರಣಿ ಮನೆಗಳ ರಾತ್ರಿ ಕನ್ನ ಕಳವು ಪ್ರಕರಣಗಳಲ್ಲಿ ಆರೋಪಿತರ ಬಂಧನ ಮತ್ತು ಸ್ವತ್ತು ವಶಕ್ಕೆ ಪಡೆದು ಚನ್ನಗಿರಿ ಡಿ ಓ ಎಸ್ ಪಿ ರುದ್ರಪ್ಪ ಎಸ್ ಉಜ್ಜನಕೊಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಎಂಟು ಮನೆಗಳ್ಳತನ ಪ್ರಕರಣಗಳು ವರದಿಯಾಗಿದ್ದು ಇದನ್ನು ಮನಗೊಂಡು ಎಸ್ ಪಿ ಶ್ರೀಮತಿ ಉಮಾ ಪ್ರಶಾಂತ್ ದಾವಣಗೆರೆ ಹಾಗೂ ಹೆಚ್ಚುವರಿ ಪೊಲೀಸ ಅಧ್ಯಕ್ಷರಾದ ಶ್ರೀ ವಿಜಯಕುಮಾರ್, ಎಂ ಸಂತೋಷ್, ಮಂಜುನಾಥ್ ಕೆ ಎಸ್ ಪಿ ಎಸ್ ರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣಗಳ ಪತ್ತೆ ಕಾರ್ಯಕ್ಕೆ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್ ಎಸ್ ನೇತೃತ್ವದಲ್ಲಿ ಪಿಎಸ್ಐ ಜಯಪ್ಪನಾಯ್ಕ್ ಮತ್ತು ಸಿಬ್ಬಂದಿಗಳ ತಂಡವನ್ನು ರಚನೆ ಮಾಡಿ ತನಿಖೆ ಕೈಗೊಂಡು ಆರೋಪಿತರ ಪತ್ತೆಗೆ ಸತತವಾಗಿ ಪ್ರಯತ್ನದಿಂದ ದಿ 01/09/ 2024ರಂದು 1)ರಾಮಾ ಅಲಿಯಾಸ್ ಬುಡ್ಡ ರಾಮ ಬಿನ್ ಕುರಿ ಹನುಮಂತಪ್ಪ 40ವರ್ಷ ಕೂಲಿ ಕೆಲಸ, ಚಿಕ್ಕಬೆನ್ನೂರು ಗ್ರಾಮ ಸಂತೆಬೆನ್ನೂರು ಹೋಬಳಿ, ಚನ್ನಗಿರಿ ತಾಲೂಕು (2) ಸಂತೋಷ್ ಟಿ ಬಿನ್ ತಿಪ್ಪೇಸ್ವಾಮಿ 48 ವರ್ಷ ಕೂಲಿ ಕೆಲಸ ಮಾವಿನಕಟ್ಟೆ, ಚೆನ್ನಗಿರಿ ತಾಲೂಕು ಇವರನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ, ಧನಂಜಯ ಹಾಗೂ ಮುಕೇಶ್ ಇವರಿಬ್ಬರನ್ನು ಸೇರಿಸಿಕೊಂಡು ನಾಲ್ಕು ಜನರ ತಂಡ ಮಾಡಿಕೊಂಡು ಜುಲೈ, ಆಗಸ್ಟ್ ತಿಂಗಳಲ್ಲಿ ನ್ಯಾಮತಿ ಪಟ್ಟಣ ಸುರುವನ್ನೇ, ಗಂಜೀನಹಳ್ಳಿ, ಚಟ್ನಳ್ಳಿ ಗ್ರಾಮಗಳಲ್ಲಿ ಮನೆಗಳ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇವರಿಂದ ಎಂಟು ಮನೆಗಳತನ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 80 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ಸೇರಿದಂತೆ ಎಲ್ಲಾ ಆಭರಣಗಳನ್ನು ವಸಪಡಿಸಿಕೊಳ್ಳಲಾಗಿದೆ.ಅವುಗಳ ಒಟ್ಟು ಮೌಲ್ಯ ಸುಮಾರು 6,20,000 ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಬಂದಿತ ಆರೋಪಿಗಳಾದ ರಾಮ ಮತ್ತು ಸಂತೋಷ್ ಇವರನ್ನ ಹಾಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿದರು.ಎಸ್‌ಪಿ ಶ್ರೀಮತಿ ಉಮಾ ಪ್ರಶಾಂತ್, ಅಡಿಷನಲ್ ಎಸ್ ಪಿ ವಿಜಯಕುಮಾರ್, ಎಂ ಸಂತೋಷ್, ಮಂಜುನಾಥ್ ಕೆ ಎಸ್ ಪಿ ಎಸ್ ಮತ್ತು ರುದ್ರಪ್ಪ ಎಸ್ ಉಜ್ಜನ ಕೊಪ್ಪ ಚನ್ನಗಿರಿ ಉಪವಿಭಾಗ ಚನ್ನಗಿರಿರವರು ನ್ಯಾಮತಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪತ್ತೆ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.