ನ್ಯಾಮತಿ:ಕುದುರೆಕೊಂಡ ಗ್ರಾಮದ ವ್ಯಾಪ್ತಿಯಕುದುರೆಕೊಂಡ, ಯರಗನಾಳು, ಸಾಲಬಾಳು ಗ್ರಾಮದ ಜಮೀನುಗಳಲ್ಲಿ ಕೇಂದ್ರ ಭೂ ವಿಜ್ಞಾನಇಲಾಖೆಯಿಂದ ನಡೆಯುತ್ತಿರುವ ಸರ್ವೆಕಾರ್ಯಕ್ಕೆಗ್ರಾಮಸ್ಥರು ಸಹಕಾರ ನೀಡುವಂತೆ ಉಪವಿಭಾಗಾಧಿಕಾರಿ ವಿ.ಅಭಿಷೇಕ ಮನವರಿಕೆ ಮಾಡಿದರು.
ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದಅವರು, ಸರ್ವೆಆಫ್ಇಂಡಿಯಾದವರುಇಡೀ ಭಾರತದಲ್ಲಿಯೇ ಸರ್ವೆಕಾರ್ಯ ಮಾಡುತ್ತಾರೆ. ಭಾರತದಲ್ಲಿರುವ ಮಣ್ಣಿನ ಸಂಪತ್ತು,ಖನಿಜ ಸಂಪತ್ತು, ನೀರಿ£ ಮೂಲ ಸಂಪತ್ತು, ಅರಣ್ಯಗಳನ್ನು ಸರ್ವೆ ಮಾಡಿದಾಖಲುಮಾಡುವುದರಿಂದÀ ಮುಂದಿನ ದಿನಗಳಲ್ಲಿ ಅದರಿಂದಉಪಯೋಗವಾಗುತ್ತದೆ ಎಂಬ ಉದ್ದೇಶ, ಅದೇರೀತಿಗ್ರಾಮದ ಸುತ್ತಮುತ್ತಲ ಭೂಮಿಯಲ್ಲಿರುವಖನಿಜ, ನೀರಿನಅಂಶವನ್ನು ಪತ್ತೆ ಹಚ್ಚಲು ಬಂದಿದ್ದಾರೆ, ಗಣಿಗಾರಿಕೆಆರಂಭಿಸಲುಅಲ್ಲಎಂದುಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ನಮಗೆ ನಿಖರವಾಗಿಯಾವಉದ್ದೇಶಕ್ಕಾಗಿ ಸರ್ವೆ ಮಾಡುತ್ತಿದ್ದಾರೆ ಎಂಬ ಮಾಹಿತಿಇಲ್ಲ. ಸರ್ವೆ ಹೆಸರಿನಲ್ಲಿ ಜಮೀನುಗಳಲ್ಲಿ ಅಡ್ಡಾಡಿ ನಷ್ಟ ಉಂಟು ಮಾಡಿದ್ದಾರೆ.ಗ್ರಾಮದ ಜಮೀನುಗಳನ್ನುಯಾವುದೇಕಾರಣಕ್ಕೂ ಸರ್ವೆ ಮಾಡುವುದು ಬೇಡಎಂದುಗ್ರಾಮಸ್ಥರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರು.
ನ್ಯಾಮತಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಕಂದಾಯಇಲಾಖೆಯ ಸಿಬ್ಬಂದಿಗಳು ಹಾಗೂ ಯರಗನಾಳು, ಕುದುರೆಕೊಂಡ ಸುರಹೊನ್ನೆಗ್ರಾಮಸ್ಥರುಇದ್ದರು.