ಹೊನ್ನಾಳಿ ಸೆ 5 ಪಟ್ಟಣದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಹೊನ್ನಾಳಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದಿಗೆ ಬುದುವಾರ ಚುನಾವಣೆ ನಡೆಯಿತು.
ಅಧ್ಯಕ್ಷರ ಗಾದೆಗೆ ಶಿವಕುಮಾರ್ ಕೆಎಸ್ ಕಮ್ಮಾರಗಟ್ಟೆ, ಉಪಾಧ್ಯಕ್ಷರ ಗಾದೆಗೆ ಕೆ ಎನ್ ಬಸವರಾಜಪ್ಪ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ನಿರ್ದೇಶಕರುಗಳು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಶಿವಕುಮಾರ್ ಕೆಎಸ್ ಕಮ್ಮಾರಗಟ್ಟೆ, ಉಪಾಧ್ಯಕ್ಷರಾಗಿ ಕೆಎನ್ ಬಸವರಾಜಪ್ಪ ಇವರುಗಳನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಹಾಗೂ ಸಿಡಿಓ ನವೀನ್ ಕುಮಾರ್ ಘೋಷಣೆ ಮಾಡಿದರು. ಕಾಂಗ್ರೆಸ್ ಪಕ್ಷದ ಮುಖಂಡ ಡಿಎಸ್ ಪ್ರದೀಪ್ ಗೌಡ್ರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ನಿರ್ದೇಶಕರುಗಳಾದ ಶೈಲೇಶ ಪಿಬಿ, ಚಂದ್ರಪ್ಪ ಪಿ ರಾಮೇಶ್ವರ, ಎನ್ ಸತೀಶ್ ಆರುಂಡಿ, ಬಿ ಕೆಂಚಪ್ಪ ಸೂರಗೊಂಡನಕೊಪ್ಪ, ಶಂಕರಗೌಡ ಆರ್ ಸಿ, ಯಶೋದಮ್ಮ, ಕರಿಬಸಪ್ಪ ಕೆ ಜಿ, ಚನ್ನವೀರಪ್ಪ ಡಿಜಿಎನ್, ಮಂಜುಳಾ ಕೆ ಜಿ, ಕೃಷ್ಣ ನಾಯ್ಕ್ ಎನ್. ಅವಳಿ ತಾಲೂಕಿನ ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷರುಗಳು ಎಚ್ಎ ಗದಿಗೇಶ್, ಶಿವಣ್ಣ ಕೋಡಿಕೊಪ್ಪ, ಸಮಾಜದ ಬಾಂಧವರು ಶುಭ ಹಾರೈಸಿದರು.