ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.
ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಯನ್ನು ತಲಾ ಒಂದೊಂದರಂತೆ ಚುನಾವಣೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ನಿರ್ದೇಶಕರುಗಳು ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಮಂಜುನಾಥ್ ಕುರುವ ಉಪಾಧ್ಯಕ್ಷರಾಗಿ ಎಸ್ ಸಿದ್ದಪ್ಪ ಬಸವನಹಳ್ಳಿ ಇವರುಗಳನ್ನ ಆಯ್ಕೆ ಮಾಡಲಾಯಿತು ಎಂದು ಚುನಾವಣಾ ಅಧಿಕಾರಿಗಳು ಹಾಗೂ ಸಿಡಿಓ ನವೀನ್ ಕುಮಾರ್ ರವರು ಘೋಷಣೆ ಮಾಡಿದರು. ಹೊನ್ನಾಳಿ ಡಿಸಿಸಿ ಬ್ಯಾಂಕಿನ ನಿರ್ದೇಶಕರುಗಳಾದ ಡಿ, ಎಸ್ ಸುರೇಂದ್ರ ನ್ಯಾಮತಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿಜಿ ವಿಶ್ವನಾಥ್ ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ನಿರ್ದೇಶಕರುಗಳಾದ ಸಣ್ಣ ಚಿಕ್ಕಪ್ಪ, ಜಿ ವಿರೇಶಪ್ಪ, ಜಿ ಧನಂಜಯ, ಎಸ್ ನಾಗರಾಜಪ್ಪ ಪಾಲಾಕ್ಷಪ್ಪ ಶ್ರೀಮತಿ ಸುಧಾ, ಕೇಶವಮೂರ್ತಿ, ವಿ ಎಚ್ ರುದ್ರೇಶ್, ಕಾರ್ಯನಿರ್ವಣ ಅಧಿಕಾರಿ ಎಂ ಜಗದೀಶ್, ಪಾಲಾಕ್ಷ ನಾಯ್ಕ, ಸಿಬ್ಬಂದಿ ವರ್ಗದವರು ಇದ್ದರು.