ನ್ಯಾಮತಿ:ಗಣೇಶಚೌತಿಯಂದು ಎಲ್ಲರೂ ಗಣೇಶನ ವಿಗ್ರಹವನ್ನು ತಂದು ಪೂಜಿಸುವುದು ಸಂಪ್ರದಾಯ, ಆದರೆ ಪಟ್ಟಣದ ಕೆಲವು ಮನೆತನದವರು ಗಣೇಶನ ವಾಹನ ಮೂಷಿಕ(ಇಲಿ)ನನ್ನು ತಂದು ಭಕ್ತಿಯಿಂದ ಪೂಜಿಸಿ ಆರಾಧಿಸುತ್ತಾರೆ.
ಚೌತಿಯಂದು ಗುಂಡಭಕ್ತರ ಮನೆಯಿಂದ ಮೂಷಿಕನನ್ನು ತಂದು ದೇವರ ಮನೆಯ ಜಗಲಿಯಲ್ಲಿ ಇಟ್ಟು ಪೂಜಿಸಿ, ಗಣೇಶನ ಪೂಜೆಗೆ ತಯಾರಿಸುವಂತೆ ಮೂಷಿಕನ ಪೂಜೆಗೆ ವಿವಿಧ ನೈವೇದ್ಯ ಪದಾರ್ಥಗಳನ್ನು ತಯಾರಿಸಿ ನೈವೇದ್ಯ, ಮಂಗಳಾರತಿ ಮಾಡಲಾಗುವುದು ನಂತರ ಸಂಜೆ ಹರಿಯುವ ಹಳ್ಳಕೊಳ್ಳಗಳಲ್ಲಿ ಮೂಷಿಕನನ್ನು ವಿಸರ್ಜನೆ ಮಾಡುತ್ತೇವೆ.
ನಮ್ಮ ಹಿರಿಯರು ಬಟ್ಟೆ ವರ್ತಕರಾಗಿದ್ದು, ಬಟ್ಟೆ ಮಾರಾಟ ಮಾಡುವುದೇ ನಮ್ಮ ಕಸುಬು, ಇಲಿಗಳು ಬಟ್ಟೆಯನ್ನು ಕಡಿಯಬಾರದು, ಉದ್ಯಮಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಮ್ಮ ಪೂರ್ವಜರು ಇಲಿಯನ್ನು ಪೂಜಿಸುತ್ತಿದ್ದರು. ಈಗ ನಾವು ಬಟ್ಟೆ ವ್ಯಾಪಾರ ಮಾಡದಿದ್ದರೂ, ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದೇವೆ ಎಂದು ಮೆರವಣಿಗೆ ಜಗಧೀಶ-ಶಶಿಕಲಾ ದಂಪತಿ, ಬಂಕಾಪುರದ ನಟರಾಜ, ಸೊಂಡೂರು ಮಹೇಶ್ವರಪ್ಪ ಹೇಳುತ್ತಾರೆ.