ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ಬಿ.ಎ, ಬಿ.ಕಾಂ., ಬಿ.ಎಸ್‍ಸ್ಸಿ., ಬಿ.ಲಿಬ್,ಐಎಸ್‍ಸ್ಸಿ., ಬಿ.ಸಿ.ಎ., ಬಿ.ಬಿ.ಎ., ಬಿಎಸ್‍ಡಬ್ಲು., ಎಂ.ಎ., ಎಂ.ಕಾಂ., ಎಂ.ಎ.,ಎಂ.ಸಿ.ಜೆ., ಎಂ.ಲಿಬ್,ಐಎಸ್‍ಸಿ., ಎಂ.ಬಿ.ಎ., ಎಂ.ಎಸ್ಸಿ., ಎಂ.ಸಿ.ಎ., ಎಂ.ಎಸ್‍ಡಬ್ಲು., ಪಿಜಿ ಡಿಪೆÇ್ಲೀಮಾ., ಡಿಪೆÇ್ಲೀಮಾ ಹಾಗೂ ಸರ್ಟಿಪಿಕೇಟ್ ಕೋರ್ಸಗಳಿಗೆ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿನಿಯರಿಗೆ, ಡಿಫೆನ್ಸ್ , ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು. ಅಲ್ಲದೇ ಕೋವಿಡ್-19 ನಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ರಜಾದಿನಗಳಂದು ಸಹ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್ www.ksoumysuru.ac.in ವೀಕ್ಷಿಸುವುದು ಅಥವಾ ಮೊ.ನಂ. 8310676181, 9902517906, 9916009318, 8095939359 ಕರೆ ಮಾಡುವುದು ಅಥವಾ ಖುದ್ದಾಗಿ ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ, ಶ್ರೀ ಜೆ.ಹೆಚ್.ಪಟೇಲ್ ಬಡಾವಣೆ, ಶಾಮನೂರು ಹಿಂಭಾಗ, ನಾಗನೂರು ರಸ್ತೆಯಲ್ಲಿರುವ ಕಚೇರಿಯನ್ನು ಸಂಪರ್ಕಿಸಲು ಪ್ರಾದೇಶಿಕ ನಿರ್ದೇಶಕರಾದ ಡಾ.ವಿಜಯ್ ಪ್ರಕಾಶ್ ತಿಳಿಸಿದ್ದಾರೆ.
—