ನ್ಯಾಮತಿ: ಪಟ್ಟಣದಲ್ಲಿರುವ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಎಳೆಗೌರಿ ಹಬ್ಬದ ಅಂಗವಾಗಿ ಹೆಣ್ಣು ಮಕ್ಕಳಿಗೆ ಉಡಿತುಂಬುವ ಕಾರ್ಯಕ್ರಮ ಜರಗಿತು. ಶ್ರೀ ಕೊಹಳ್ಳಿ ಹಿರೇಮಠದ ವೇದಮೂರ್ತಿ ವಿಶ್ವರಾಧ್ಯ ಗುರುಗಳ ಇವರ ಪುರೋಹಿತ್ಯದಲ್ಲಿ ಶ್ರೀ ಪೇಟೆ ಬಸವೇಶ್ವರ ಸ್ವಾಮಿಗೆ, ಗೋಮಾತೆ, ಎಳೆಗೌರಿ ದೇವತೆಗಳಿಗೆ ಹಾಗೂ ವಿನಾಯಕ ಸ್ವಾಮಿಗೆ ಅಷ್ಟೋತ್ತರ, ಕುಂಕುಮಾರ್ಚನೆ, ರುದ್ರಾಭಿಷೇಕ, ಬಿಲ್ವಾರ್ಚನೆ ಮುಂತಾದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ನಂತರ ಭಕ್ತರು ಕುರಿತು ಮಾತನಾಡಿದ ಶ್ರೀಗಳು ಗಣೇಶನನ್ನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ನಂತರ ನಾಲ್ಕನೇ ದಿನ ಮೂಲ ನಕ್ಷತ್ರದಲ್ಲಿ ಆಚರಿಸುವ ಎಳೆಗೌರಿ ಹಬ್ಬದ ದಿನ ಮನೆಯ ಒಡತಿ ಬೆಳಗಿನಿಂದ ಉಪವಾಸವಿದ್ದು 25ಕ್ಕೂ ಹೆಚ್ಚು ಬಗೆಯ ನೈವೇದ್ಯಗಳನ್ನು ಸಿದ್ಧಪಡಿಸುವುದು ರಾತ್ರಿ ಜಂಗಮ ಅರ್ಚನೆಯ ನಂತರ ತಾಯಿಗೆ ನೈವೇದ್ಯ ಮಾಡಿ ಕುಟುಂಬ ಸಮೇತ ನೈವೇದ್ಯವನ್ನು ಸ್ವೀಕರಿಸುವರು ಇದು ಬಹಳ ಕಟ್ಟು ನಿಟ್ಟಿನ ರೂಪ, ಎಳೆತರುವಾಗ ಬೇರೆಯವರೊಂದಿಗೆ ಮಾತನಾಡುವಂತಿಲ್ಲ ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ಉಡಿ ತುಂಬಲಾಯಿತು. ಬಂದಂತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು.ದೇವಸ್ಥಾನ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು, ಸರ್ವ ನಿರ್ದೇಶಕರುಗಳು, ಪಟ್ಟಣದ ಸರ್ವಭಕ್ತಾದಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಳೆಗೌರಿಗೆ ಭಕ್ತಿಗೆ ಪಾತ್ರರಾದರು.