ನ್ಯಾಮತಿ:ನಮ್ಮದೇಶದ ಸಂವಿಧಾನದ ಪೀಠಿಕೆಯಲ್ಲಿಅತ್ಯಂತದೊಡ್ಡ ಮೌಲ್ಯಗಳಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ನ್ಯಾಮತಿತಾಲ್ಲೂಕಿ£ ಗಡಿಭಾಗ ಟಿ.ಗೋಪಗೊಂಡನಹಳ್ಳಿ ಹೆದ್ದಾರಿಯಲ್ಲಿ ಭಾನುವಾರಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್‍ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಮತಿತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿ, ಚೀಲೂರು, ಚೀಲೂರುಕಡದಕಟ್ಟೆ, ಕುರುವ ಗೋವಿನಕೋವಿ ಮತ್ತು ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ, ದಿಡಗೂರು, ದೇವನಾಯಕನಹಳ್ಳಿ, ಗೊಲ್ಲರಹಳ್ಳಿ, ಮಾಸಡಿ, ಅರಕೆರೆ, ನರಸಗೊಂಡನಹಳ್ಳಿ, ಅರಕೆರೆಕಾಲೋನಿಯವರೆಗೆಒಟ್ಟು 38 ಕಿ.ಮೀ ಉದ್ದದವರೆಗೆ ಮಾನವ ಸರಪಳಿ ನಿರ್ಮಾಣ ಮಾಡಿ ನಮ್ಮ ಸಂವಿಧಾನದ ಮಹತ್ವವನ್ನು ಸಾರಲಾಗಿದೆಎಂದರು.
ಹಿರೇಕಲ್ಮಠಒಡೆಯರ್‍ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಪೊಲೀಸ್‍ಇನ್ಸ್‍ಪೆಕ್ಟರ್‍ಎನ್.ಎಸ್.ರವಿ, ಸಮಾಜಕಲ್ಯಾಣ ಸಹಾಯಕ ನಿರ್ದೇಶಕಿಎಚ್.ಎಲ್.ಉಮಾ, ಬೆಸ್ಕಾಂ ಬಿ.ಕೆ.ಶ್ರೀನಿವಾಸ, ಕಾಂಗ್ರೆಸ್ ಮುಖಂಡರಾದ ಡಿ.ಜಿ.ವಿಶ್ವನಾಥ, ಎಚ್.ಎ.ಉಮಾಪತಿ, ಪ್ರದೀಪಗೌಡ,ಸುರೇಂದ್ರಗೌಡ, ವಿವಿಧಗ್ರಾಮ ಪಂಚಾಯತಿಅಧ್ಯಕ್ಷರು, ಸದಸ್ಯರು, ಪಿಡಿಒಗಳು ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ನೌಕರರು, ನ್ಯಾಮತಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ತಾಲ್ಲೂಕಿನಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಹಶಿಕ್ಷಕರು,ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು, ಕಾಲೇಜಿನಉಪನ್ಯಾಸಕರು, ಗೃಹರಕ್ಷಕದಳ ಸಿಬ್ಬಂದಿ, ಬೆಸ್ಕಾಂ, ಆರೋಗ್ಯಅರಣ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಟನೆಗಳು ಸಾರ್ವಜನಿಕರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.