ನ್ಯಾಮತಿ: ತಾಲೂಕು ಮುಸೇನಾಳ ಗ್ರಾಮಕ್ಕೆ ಇಂದು ನೂತನವಾಗಿ KSRTC ಬಸ್ ವಿದ್ಯಾರ್ಥಿಗಳಿಗೆ ಮತ್ತು ಕೂಲಿಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಉದ್ದೇಶ ಇಟ್ಟುಕೊಂಡು ಬಸ್ ಕಲ್ಪಿಸಿ ಇಂದು ಚಾಲನೆ ನೀಡಲಾಯಿತು ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.
ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ಮುಸೇನಾಳ ಗ್ರಾಮ ನ್ಯಾಮತಿ ತಾಲೂಕಿನ ಗಡಿ ಭಾಗದಲ್ಲಿ ಇದೆ. ಈ ಗ್ರಾಮಕ್ಕೆ ಸುಮಾರು ವರ್ಷಗಳಿಂದ ಸರ್ಕಾರಿ ಬಸ್ಸಿನ ಸೌಲಭ್ಯ ಇಲ್ಲದೆ ಸಾರ್ವಜನಿಕರಿಗೆ ಕೂಲಿ ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು. ಅದರ ಜೊತೆಗೆ ಗ್ರಾಮಸ್ಥರ ಬೇಡಿಕೆಯು ಸಹ ಇತ್ತು. ರಾಜ್ಯ ಸರ್ಕಾರದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರ ಗಮನಕ್ಕೆ ತಂದು ಅವರ ಆದೇಶದ ಹಿನ್ನೆಲೆಯಲ್ಲಿ ಶಿವಮೊಗ್ಗ ಡಿಪೆÇೀ ಮ್ಯಾನೇಜರ್ ಗಮನಕ್ಕೆ ತಂದು ಬಸ್ಸಿನ ಅನುಮತಿಯನ್ನು ಪಡೆದು ಇಂದು ಚಾಲನೆ ನೀಡಲಾಯಿತು. ಶಿವಮೊಗ್ಗ ಡಿಪೆÇೀದಿಂದ ಬಸ್ ಹೊರಟು ಮುಸೇನಾಳ್ ಗ್ರಾಮದಿಂದ ಪ್ರಾರಂಭಗೊಂಡು ಚಟ್ನಳ್ಳಿ, ಸೋಗಿಲು, ಫಲವನಹಳ್ಳಿ, ಗಂಜಿನಳ್ಳಿ ಸೌಳಂಗ ಮಾರ್ಗವಾಗಿ ನ್ಯಾಮತಿಗೆ ಹೊರಟು, ಪುನಃ ಅದೇ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವುದು ಎಂದರು. ಮುಸೇನಾಳ ಗ್ರಾಮಸ್ಥರಿಂದ ಶಾಸಕ ಡಿಜಿ ಶಾಂತನಗೌಡ್ರುರವರಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಶಿವಮೊಗ್ಗ ಡಿಪೆÇೀ ಮ್ಯಾನೇಜರ್ ರಾಮಚಂದ್ರಪ್ಪ, ಶಿವರಾಂ ನಾಯ್ಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿಜಿ ವಿಶ್ವನಾಥ್, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ನಾಯ್ಕ್, ಮಂಜುನಾಯ್ಕ, ಶಿವಾಜಿ ನಾಯ್ಕ್, ಈಶ್ವರ್ ನಾಯ್ಕ್, ಮುಸೇನಾಳ ಗ್ರಾಮಸ್ಥರು ಸಹ ಇದ್ದರು.