ನ್ಯಾಮತಿ:
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸರ್.ಎಂ.ವಿಶ್ವೇಶ್ವರಯ್ಯಅವರ ಆದರ್ಶಗಳನ್ನು ಪಾಲಿಸಬೇಕು ಎಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಗ್ರಂಥ ಪಾಲಕ ಜಿ.ಆರ್.ರಾಜಶೇಖರ ಸಲಹೆ ನೀಡಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆಂಚಿಕೊಪ್ಪ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಬುಧವಾರ ಶಾಲೆಯ ಆವರಣದಲ್ಲಿ ನಡೆದ ಸರ್.ಎಂ. ವಿಶ್ವೇಶ್ವರಯ್ಯ ಸ್ಮರಣಾರ್ಥ ದಿ.ಈರಮ್ಮ ಮತ್ತು ವೀರಭದ್ರಪ್ಪ ದತ್ತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವಿಶ್ವೇಶ್ವರಯ್ಯಅವರು ಶಿಸ್ತು, ಸಮಯಪಾಲನೆ, ಭ್ರಷ್ಟಾಚಾರ ಮುಕ್ತ ವ್ಯಕ್ತಿಯಾಗಿದ್ದರು.ನಾಲ್ವಡಿಕೃಷ್ಣರಾಜಒಡೆಯರ ಅವಧಿಯಲ್ಲಿ ಅವರೊಂದಿಗೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಇಂದಿಗೂ ಸ್ಮರಣಿಯರಾಗಿದ್ದಾರೆ ಎಂದರು.


ದತ್ತಿದಾನಿ ಕನ್ನಡ ನಾಡು,ನುಡಿ ಹಿತಚಿಂತಕಕೋಟೆಕರೆಗೌಡ್ರ ನಾಗರಾಜಪ್ಪ ಮಾತನಾಡಿ, ಕನ್ನಡ ಭಾಷೆ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಕನ್ನಡಜನತೆಜಾಗೃತರಾಗಬೇಕು. ಮಕ್ಕಳಲ್ಲಿ ಕನ್ನಡ ಭಾಷಾಅಭಿಮಾನ ಬೆಳಸುವಲ್ಲಿ ಶಿಕ್ಷಕರ ಪಾತ್ರದೊಡ್ಡದುಎಂದರು.
ಎಸ್‍ಡಿಎಂಸಿ ಅಧ್ಯಕ್ಷ ಜಿ.ಎಚ್.ಮಹೇಶಪ್ಪಗೌಡಕಾರ್ಯಕ್ರಮಉದ್ಘಾಟನೆ ನೆರವೇರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಮುಖ್ಯ ಶಿಕ್ಷಕ ವೀರಭದ್ರಪ್ಪ ಕೊಟ್ರಳ್ಳಿ, ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಸಮಾಜ ಕಾರ್ಯಕರ್ತೆ ಸೌಭಾಗ್ಯ, ಜಾನಪದ ಗಾಯಕರಾದ ಕೆ. ಮಂಜಪ್ಪ, ನವೀನ, ರೇವಣಸಿದ್ದಪ್ಪ, ಸಿ.ಕೆ.ಬೋಜರಾಜ, ಎ,ಎಂ.ಶಿವಕುಮಾರ, ಎಸ್.ರಾಜಶೇಖರ, ಬಿ.ಜಿ.ಸೀಮಾ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನಎಸ್.ಜಿ.ಬಸವರಾಜಪ್ಪ, ಚಂದ್ರೇಗೌಡ, ಎಂ.ಎಸ್.ಜಗದೀಶ, ಚಂದನ್‍ಜಂಗ್ಲಿ, ನಾಗರಾಜ, ಈ ಸುಮಲತಾ, ಕವಿತಾ ಬಳೆಗಾರ, ಮಹೇಶ್ವರಪ್ಪ, ಎಸ್‍ಡಿಎಂಸಿ ಸದಸ್ಯರಾದ ಮಂಜುಳಾ, ಚನ್ನೇಶ, ಸಹಶಿಕ್ಷಕರಾದ ಎಸ್.ಲತಾ, ಎ.ಬಿ.ಶಶಿಕುಮಾರ, ಕೆ.ರವಿಕುಮಾರ, ಗೀತಮ್ಮ, ಬಂದಮ್ಮ, ನಾಗಮ್ಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *