ನ್ಯಾಮತಿ:ತಾಲ್ಲೂಕಿನ ಚಿ.ಕಡದಕಟ್ಟೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಗೊಂಡನಹಳ್ಳಿಯಲ್ಲಿ ಮರಳಿನ ವಿಚಾರವಾಗಿಕೊಲೆಯಾದ ಶಿವರಾಜ ಅವರಕುಟುಂಬಕ್ಕೆ ಸರ್ಕಾರದಿಂದ ಪರಿಹಾರನೀಡುವಂತೆ ಹಾಗೂ ಗಾಯಗೊಂಡಿರುವ ಭರತ್‍ಚಿಕಿತ್ಸೆಗೆಧನಸಹಾಯ ನೀಡುವಂತೆ ಆಗ್ರಹಿಸಿ ದಲಿತ ಸಂಘಟನೆ ಪದಾಧಿಕಾರಿಗಳು ಮತ್ತುಗ್ರಾಮಸ್ಥರುಗುರುವಾರಚೀಲೂರಿನಲ್ಲಿರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ವಿ.ಅಭಿಷೇಕ ಮಾತನಾಡಿ, ಇಂತಹ ಪ್ರಕರಣ ನಡೆಯಬಾರದಿತ್ತು.ಕೊಲೆಯಾದ ಶಿವರಾಜನ ಬಡತನಕುಟುಂಬದಲ್ಲಿತಾಯಿ, ಪತ್ನಿ, ಇಬ್ಬರು ಪುತ್ರಿಯರುಇದ್ದಾರೆ.ಇವರಿಗೆ ನ್ಯಾಯಒದಗಿಸುವಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.


ನ್ಯಾಮತಿ ಪೊಲೀಸ್‍ಠಾಣೆಯಲ್ಲಿ ಆರೋಪಿಗಳ ಮೇಲೆ ಕೊಲೆ ಪ್ರಕರಣ ಮತ್ತುಜಾತಿನಿಂದನೆ ಪ್ರಕರಣದಾಖಲಾಗಿದ್ದು, ಜಾತಿನಿಂದನೆ ಪ್ರಕರಣದಲ್ಲಿರೂ 8.25 ಲಕ್ಷ ಹಣದಲ್ಲಿ ಈಗಾಗಲೇ ರೂ. 4.12,500(ನಾಲ್ಕು ಲಕ್ಷ, ಹನ್ನೆರೆಡು ಸಾವಿರದಐದು ನೂರು) ಹಣಆರ್‍ಟಿಜಿಎಸ್ ಮಾಡಲಾಗಿದೆ. ಗಾಯಗೊಂಡಿರುವ ಭರತ್‍ನಚಿಕಿತ್ಸೆಗಾಗಿರೂ.50 ಸಾವಿರಆರ್‍ಟಿಜಿಎಸ್ ಮಾಡಲಾಗಿದೆ.
ಶಿವರಾಜನ ಮಕ್ಕಳ ವಿದ್ಯಾಭ್ಯಾಸ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳುತ್ತದೆ.ಮೃತನ ಪತ್ನಿಗೆ ಮಾಹೆಯಾನ ಏಳು ಸಾವಿರ ಪಿಂಚಣಿ ಮತ್ತು ಸರ್ಕಾರಿ ನೌಕರಿಗೆ ಶಿಫಾರಸು ಮಾಡಲಾಗುವುದು. ಬಗರಹುಕುಂ ಸಮಿತಿ ಮೂಲಕ ಜಮೀನು ನೀಡುವ ಬಗ್ಗೆ ಶಾಸಕರೊಂದಿಗೆಚರ್ಚಿಸಲಾಗುವುದು.ಯಾವುದೇಕಾರಣಕ್ಕೂಎರಡು ಗ್ರಾಮಗಳ ಗ್ರಾಮಸ್ಥರು ಭಯಪಡುವುದು ಬೇಡ, ಪೊಲೀಸರಿಗೆರಕ್ಷಣೆ ನೀಡುವಂತೆ ಸೂಚಿಸಲಾಗಿದೆಎಂದು ತಿಳಿಸಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಅಂಬೇಡ್ಕರ್ ಸೇವಾ ಸಮಿತಿಯಜಿಲ್ಲಾಘಟಕದಅಧ್ಯಕ್ಷ ಬೆಳಗುತ್ತಿ ಎ.ಕೆ.ರಂಗನಾಥ, ಜಿಲ್ಲಾ ಸಂಘಟನಾ ಸಂಚಾಲಕಚೀಲೂರು ಎ.ಕೆ.ಕುಮಾರ, ತಾಲ್ಲೂಕು ಸಂಘಟನಾ ಸಂಚಾಲಕ ಬಿ. ಸೋಮಶೇಖರ, ನ್ಯಾಮತಿ ಹರೀಶ, ಮಾದಾಪುರ ಸಿದ್ದೇ±, ಗೋವಿನಕೋವಿ ಎ.ಕೆ.ನರಸಿಂಹಪ್ಪ ಮತ್ತುಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಪೊಲೀಸ್‍ಅಧಿಕಾರಿ ವಿಜಯಕುಮಾರ ಸಂತೋಷ, ಡಿವೈಎಸ್ಪಿ ರುದ್ರಪ್ಪಎಸ್. ಉಜ್ಜನಕೊಪ್ಪ, ನ್ಯಾಮತಿ ಪೊಲೀಸ್‍ಇನ್ಸ್‍ಪೆಕ್ಟರ್‍ಎನ್.ಎಸ್.ರವಿ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಜಿಲ್ಲಾ ಸಮಾಜಕಲ್ಯಾಣಅಧಿಕಾರಿ ಜೆ.ಡಿ.ನಾಗರಾಜ, ತಾಲ್ಲೂಕುಅಧಿಕಾರಿಎಚ್.ಎಲ್.ಉಮಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *