ಹೊನ್ನಾಳಿ,20: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2023 2024ನೇ ಪ್ರಸಕ್ತ ವರ್ಷ75.55 ಲಕ್ಷ ನಿವ್ವಳ ಲಾಭ ಗಳಿಸಿದೆ ಅಂದರೆ ಕಳೆದ ವರ್ಷಕ್ಕಿಂತ ರೂ. 29.54 ಲಕ್ಷ ಹೆಚ್ಚಿಗೆ ಲಾಭ ಗಳಿಸಿದ್ದು ಸಂತಸದ ಸಂಗತಿಯಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಕೆ. ತಿಮ್ಮೇಶಪ್ಪ ಅವರು ಹೇಳಿದರು.
ಶುಕ್ರವಾರ ಪಿಎಲ್‍ಡಿ ಬ್ಯಾಂಕ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆಯನ್ನು ಉದ್ಘಾಟಿಸಿ ಹಾಗೂ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.
ಸೆ.20ರ ಇಂದು ಬ್ಯಾಂಕ್ ನ 86ನೇ ವಾರ್ಷಿಕ ಸಭೆಯನ್ನು ಆಚರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶೇಕಡ 80ರಷ್ಟು ಸಾಲ ವಸೂಲಾತಿ ಗುರಿಹೊಂದಲಾಗಿತ್ತು , ಆದರೆ ಎಲ್ಲರ ಸಹಕಾರದಿಂದ ವಿಶೇಷವಾಗಿ ಹಾಲಿ ಮತ್ತು ಮಾಜಿ ಶಾಸಕರುಗಳು, ಬ್ಯಾಂಕ್ ನ ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಹಾಗೂ ನಿರ್ದೇಶಕರುಗಳು ರೈತ ಮತ್ತು ರೈತ ಸಂಘದ ಪದಾಧಿಕಾರಿಗಳ ಸಹಕಾರದಿಂದ ಶೇಕಡ 86.01ರಷ್ಟು ಗುರಿ ಸಾಧಿಸಿದ್ದೇವೆ ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುವುದಾಗಿ ಹೇಳಿದರು.
ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಬ್ಯಾಂಕಿನ ಉಪಾಧ್ಯಕ್ಷರಾದ ಆರ್ ನಾಗಪ್ಪ ಅವರು ಎಲ್ಲರನ್ನೂ ಸ್ವಾಗತಿಸಿದರು.. ರೈತ ಮುಖಂಡ ಹಿರೇಮಠದ ಬಸವರಾಜಪ್ಪ ಅವರ ರೈತ ಗೀತೆ ಹಾಡಿದರು.
ಬ್ಯಾಂಕ್ ನ ನಿರ್ದೇಶಕ ಎ. ನಾಗೇಂದ್ರಪ್ಪ ಅವರು ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ಓದಿ ದಾಖಲು ಮಾಡಲಾಯಿತು, ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಬ್ಯಾಂಕ್ ನ ವ್ಯವಸ್ಥಾಪಕಿ ಸಿ.ಎನ್. ವಿಶಾಲಾಕ್ಷಮ್ಮ ಅವರು ಓದಿದರು.
ಸಭೆಯ ಅರಂಭದಲ್ಲಿ ಕೆಲವಾರು ಜನ ಬ್ಯಾಂಕ್ ಸದಸ್ಯರುಗಳು ಸಭೆಯ ತಿಳುವಳಿಕೆ ಪತ್ರಗಳನ್ನು ತಮಗೆ ಬಂದಿರುವುದಿಲ್ಲ ಎಂದು ಅಕ್ಷೇಪಣೆ ಮಾಡಿ ಮಾತನಾಡಿದರು,ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕರು ನಿಯಮಾವಳಿಗಳ ಪ್ರಕಾರ ಎಲ್ಲಾ ಸದಸ್ಯರುಗಳಿಗೆ ಮಹಾ ಸಭೆಯ ತಿಳುವಳಿಕೆ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿತ್ತು, ಆದರೆ, ಕೆಲವು ಕಡೆಗಳಲ್ಲಿ ಅಂಚೆ ಇಲಾಖೆ ಪತ್ರ ಬಟವಾಡೆಯಲ್ಲಿನ ನ್ಯೂನತೆಯಿಂದ ಹೀಗಾಗಿದೆ ಮುಂದಿನ ಬಾರಿ ಅಂಚೆ ಮೂಲಕ ಕಳುಹಿಸುವ ಜೊತೆಗೆ ಮೊಬೈಲ್ ನಂಬರ್ ಗಳಿಗೆ ಕೂಡ ಕರೆ ಮಾಡಿ ತಿಳಿಸಲಾಗುವುದು ಎಂದರು.
ಸದಸ್ಯರೊಬ್ಬರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಾಗಿ ವಿಂಗಡಣೆಯಾಗಿದ್ದು, ನ್ಯಾಮತಿ ತಾಲೂಕಿಗೆ ಪ್ರತ್ಯೇಕವಾಗಿ ಪಿ.ಎಲï.ಡಿ.ಬ್ಯಾಂಕ್ ನ ಶಾಖೆಯನ್ನು ತೆರೆಯಬೇಕು ಎಂದು ಬೇಡಿಕೆ ಇಟ್ಟಾಗ ಈ ಬಗ್ಗೆ ಸಹಕಾರಿ ಕ್ಷೇತ್ರದ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಲಾಯಿತು
ಸಭೆಯಲ್ಲಿ 2023-24ನೇ ಸಾಲಿನ ಅಡಳಿತ ವರದಿಯನ್ನು ಮಾಜಿ ಅಧ್ಯ ಕ್ಷ ಹಾಲಿ ಸದಸ್ಯ ಟಿ.ಜಿ.ರಮೇಶ್ ಗೌಡ ಅವರು ಸಭೆಯಲ್ಲಿ ಓದಿದ ನಂತರ ಅಂಗೀಕಾರ ಪಡೆಯಲಾಯಿತು,
2023-24ನೇ ಸಾಲಿನ ಲೆಕ್ಕಪರಿಶೋಧನಾ ಆರ್ಥಿಕ ತಃಖ್ತೆಗಳನ್ನು ವ್ಯವಸ್ಖಾಪಕಿ ವಿಶಾಲಾಕ್ಷಮ್ಮ ಓದಿದ ನಂತರ ಅಂಗೀಕರಿಸಲಾಯಿತು, ಅನುಪಾಲನ ವರದಿಯನ್ನು ಎಂ.ಜಿ.ಬಸವರಾಜಪ್ಪ, ಲೆಕ್ಕಪರಿಶೋಧಕರ ಆಯ್ಕೆ ಬಗ್ಗೆ ಎಲï.ಕೆ. ಚಂದ್ರಪ್ಪ, ಅಂದಾಜು ಬಜೆಟ್ ಗಿಂತ ಹೆಚ್ಚುವರಿ ಖರ್ಚಾದ ಬಾಬುಗಳಿಗೆ ಮಂಜೂರಾತಿ ಬಗ್ಗೆ ಎಚï.ಪಿ. ವಿಜಯಕುರ್ಮಾ ಹಾಗೂ ಬ್ಯಾಂಕ್ ಗಳಿಸಿರುವ ನಿವ್ವಳ ಲಾಭಾಂಶ ವಿಂಗಡಣೆ ಕುರಿತು ಕೆ.ವಿ.ನಾಗರಾಜ್ ಅವರುಗಳು ವಿಷಯ ಮಂಡನೆ ಮಾಡಿ ಅಂಗೀಕಾರ ಪಡೆಯಲಾಯಿತು.
ಸಭೆಯಲ್ಲಿ ಬ್ಯಾಂಕ್ ನ ಹಾಲಿ ಮತ್ತು ಮಾಜಿ ಅಧ್ಚಕ್ಷರು,ಉಪಾಧ್ಯಕ್ಷರು, ಸದಸ್ಯರುಗಳು, ರೈತ ಸಂಘದ ಪದಾಧಿಕಾರಿಗಳು, ರೈತರು, ಇತರ ಮುಖಂಡರು ಭಾಗವಹಿಸಿದ್ದರು.