ನ್ಯಾಮತಿ ತಾಯಂದಿರು ಮನೆಯಲ್ಲಿ ಪೌಷ್ಟಿಕಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಬಳಸಬೇಕು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಎಂದು ಸೌಳಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಪಾಟೀಲ್ ಸಲಹೆ ನೀಡಿದರು.
ಸವಳಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಂದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಭೇಟಿ ಬಚಾವ್ ಭೇಟಿ ಪಡಾವೋ ರಕ್ತ ಹೀನತೆ ಕುರಿತು ಒಂದು ದಿನದ ಕಾರ್ಯಗಾರರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇದಾವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶ ಮತ್ತು ಪಟ್ಟಣದ ಆಹಾರ ಪದ್ಧತಿಗಳಲ್ಲಿ ವ್ಯತ್ಯಾಸವಿದ್ದು ಗ್ರಾಮೀಣ ಪ್ರದೇಶಗಳ ಆಹಾರದಲ್ಲಿ ಪೌಷ್ಟಿಕತೆ ಇರುತ್ತದೆ ಮನೆಯಲ್ಲಿ ತಯಾರಿಸುವ ಆಹಾರದಲ್ಲಿ ಹಣ್ಣು ತರಕಾರಿ ಸಿರಿಧಾನ್ಯಗಳನ್ನ ಹೆಚ್ಚು ಬಳಸಿ ಎಂದು ಮನವಿ ಮಾಡಿದರು. ಚಿನ್ನಿಕಟ್ಟಿ ಆಯುಷ್ಯ ವೈಧ್ಯ ಕವಿತಾ, ಎಸಿಡಿಪಿಓ ಹೆಚ್ ಫಾತಿಮಾ, ಸೀತಮ್ಮ, ಸರಸ್ವತಿ, ಭೋವಿ ಕ್ರಾಂತಿಕಾರಿ ಸಂಘದ ಮುಖಂಡ ದಿನೇಶ್, ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ನೇಕಾರ, ಸಿಡಿಪಿಓ ಕಚೇರಿಯ ಸಂಯೋಜಕ ಸುದೀಪ್ ಅವರು ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಿಂಗಮ್ಮ, ಸದಸ್ಯರಾದ ರತ್ನಮ್ಮ, ಕೃಷ್ಣಪ್ಪ, ರುಕ್ಮಿಣಿ ಬಾಯಿ, ಮುಖ್ಯ ಶಿಕ್ಷಕಿ ಯಶೋದ, ವಿವಿಧ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು, ಸಂಜೀವಿನಿ ಒಕ್ಕೂಟದ ಮಹಿಳೆಯರು ತಾಯಂದಿರು ಉಪಸ್ಥಿತಿಯಲ್ಲಿದ್ದರು.