ನ್ಯಾಮತಿ ತಾಲೂಕು ಗೋವಿನ ಕೋವಿ ಹಾಲು ಉತ್ಪಾದಕರ ಸಹಕಾರ ಸಂಘ ನಿ ಗೋವಿನ ಕೋವಿ ಇದರ 2023 -24ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೋಮವಾರ ಸಂಘದ ಸಭಾಭವನದಲ್ಲಿ ನಡೆಯಿತು. ಶಿಮ್ಯೂಲ ನಿರ್ದೇಶಕ ಬಿಜಿ ಬಸವರಾಜಪ್ಪ ಹಾಲು ಉತ್ಪಾದಕರ ಕುರಿತು ಮಾತನಾಡಿದ ಅವರು 23 24ನೇ ಸಾಲಿನಲ್ಲಿ ಈ ಸಂಘ 5,53,891 ರೂ ಲಾಭಗಳಿಸಿದೆ. ಪಶು ಆಹಾರ ಮತ್ತು ಹುಲ್ಲು ಕತ್ತರಿಸುವ ಯಂತ್ರ ಸಬ್ಸಿಡಿ ರೂಪದಲ್ಲಿ ಒಕ್ಕೂಟದಲ್ಲಿ ದೊರೆಯುತ್ತದೆ. ನಿಮ್ಮ ಸಂಘಕ್ಕೆ ಹಸುವಿನ ಮೈಟ್ ಒದಗಿಸಲಾಗುವುದು ಸಂಘದ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.
ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಮೂರು ಜನ ಹಾಲು ಉತ್ಪಾದಕರಿಗೆ ಕುಕ್ಕರ್ ವಿತರಿಸಲಾಯಿತು. ಮೊದಲನೇ ಬಹುಮಾನ 10000, ಸಾವಿರ ಲೀಟರಗೆ , ಎರಡನೇ ಬಹುಮಾನ 8000 ಲೀಟರಗೆ , ಮೂರನೇ ಬಹುಮಾನ 7000 ಲೀಟರಗೆ ಬಹುಮಾನ ವಿತರಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷ,ಜಿ ಪರಮೇಶ್ವರಪ್ಪ, ಉಪಾಧ್ಯಕ್ಷರು ಶ್ರೀಮತಿ ಲಕ್ಷ್ಮಿ. ನಿರ್ದೇಶಕರುಗಳಾದ ವಿ ಎಚ್ ರುದ್ರೇಶ್, ಎಸ್ ಸಿದ್ದೇಶ್, ಎಚ್ ಆನಂದಪ್ಪ, ಎಸ್ ಬಾನಪ್ಪ, ಯುಎಸ್ ನಾಗರಾಜ್, ನಾಗರಾಜ್, ಶಾರದಾ, ಕಾರ್ಯದರ್ಶಿ ರಾಹುಲ್ ವಿ, ಆರ್ ವೀರೇಶ್ ಹಾಗೂ ರೈತ ಬಾಂಧವರು ಸಹ ಭಾಗಿಯಾಗಿದ್ದರು.