ನ್ಯಾಮತಿ:ಸಾರ್ವಜನಿಕರಲ್ಲಿ ಗ್ರಾಮ ಆರೋಗ್ಯ ಪರಿಕಲ್ಪನೆ ಅರಿವು, ಎಲ್ಲರಿಗೂ ಆರೋಗ್ಯಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ನಡೆಯಿತು ಎಂದು ಕುಂಕುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಪಿ.ಚಂದನ್ ಹೇಳಿದರು.
ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ‘ಗ್ರಾಮಆರೋಗ್ಯ’ ಅನುಷ್ಠಾನ ಕುರಿತು ಸರ್ವ ಸದಸ್ಯರು, ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯ ಪಡೆಯ ಮೂಲಕ ಸಮುದಾಯಕ್ಕೆ ತಲುಪಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಮತಿ ತಾಲ್ಲೂಕು ನೊಡೆಲ್ಅಧಿಕಾರಿ ವಿನುತಾ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಜಯಪ್ಪ, ಆರೋಗ್ಯಇಲಾಖೆಯ ಅನಿತಾ, ಸಿಡಿಪಿಒ ಕಚೇರಿಯ ವಲಯ ಮೇಲ್ವಿಚಾರಕಿ ದಾಕ್ಷಾಯಣಿ ಪಾವಟೆ ಅವರು ಗ್ರಾಮ ಆರೋಗ್ಯದ ಉದ್ದೇಶ, ಅನುಷ್ಠಾನ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಶ್ರುತಿರುದ್ರೇಶ ಮತ್ತು ಸದಸ್ಯರು, ಕಾರ್ಯದರ್ಶಿ ಶಾಂತವೀರಯ್ಯ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.