ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಾಧ್ಯಂತ ಗಾಂಜಾ ಹಾಗೂ ಇಸ್ಪಿಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ, ಇದರಿಂದ ಗಾಂಜಾ ಸೇವೆನೆ ಚಟಕ್ಕೆ ಬಿದ್ದಿರುವ ಯುವ ಸಮುದಾಯ ಹಾಳಾಗುತ್ತಿದೆ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನದ ಬಳಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಡಿದರು.
ಅವಳಿ ತಾಲೂಕಿಗೆ ಹೊರಗಿನಿಂದ ಗಾಂಜಾ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ,ಇದರಿಂದ ಯುವಕರು ಗಾಂಜಾ ಸೇವನೆಯಿಂದ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ, ಮತ್ತೊಂದು ಕಡೆ ಇಸ್ಪಿಟ್ ಜೂಜಾಟದಲ್ಲಿ ತೊಡಗಿಸಿಕೊಂಡು ಆಥರ್ಿಕ ನಷ್ಟ ಅನುಭವಿಸುವುದಲ್ಲದೆ ಕುಟುಂಬದ ನೆಮ್ಮದಿ ಕೂಡ ಹಾಳಾಗುತ್ತಿದೆ,ಕೂಡಲೆ ಪೊಲೀಸ್ ಇಲಾಖೆ ತನಿಖೆ ಕೈಗೊಂಡು ಗಾಂಜಾ ಮಾರಾಟ ಮಾಡುತ್ತಿರುವ ಆರೋಪಿಗಳು ಎಷ್ಟೇ ದೊಡ್ಡವರಿರಲಿ ಕೂಡಲೆ ಬಂಧಿಸಿ ಗಾಂಜಾ ಮಾರಾಟವನ್ನು ಅಡಗಿಸಿ ಎಂದು ಹೇಳಿದರು.
ನಾನೂ ಸಹ ಅವಳಿ ತಾಲೂಕಿನಲ್ಲಿ ಗಾಂಜಾ ಹಾಗೂ ಇಸ್ಪಿಟ್ ಜೂಜು ಎಲ್ಲಿಲ್ಲದೆ ನಡೆಯುತ್ತಿರುವ ಬಗೆ ತಿಳಿಸಿ ಕೂಡಲೆ ಅದನ್ನು ಮಟ್ಟ ಹಾಕುವ ಬಗೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ಜತೆ ಮಾತನಡಿದ್ದೇನೆ, ಅವರೂ ಸಹ ಗಾಂಜಾ ಮಾರಾಟ ಮಡುವವರ ವಿರುದ್ದ ನಿಧರ್ಾಕ್ಷಿಣವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ತುಂಗಾ ನಾಲೆಯ ವ್ಯಾಪ್ತಿಯಲ್ಲಿ ರೈತರು ಭತ್ತ ನಾಟಿ ಮಾಡಿ ಗೊಬ್ಬರ ಹಾಕಿದ್ದಾರೆ,ಆದರೆ ಈ ಕ್ಷಣಕ್ಕೆ ನೀರು ತುತರ್ು ಅವಶ್ಯಕತೆ ಇದೆ, ತಕ್ಷಣ ನೀರು ಬಿಡಿಸಿ ಎಂದು ಒತ್ತಾಯಿಸಿದರು.ಇಲ್ಲದಿದ್ದರೆ ಬಿತ್ತನೆ ಮಾಡಿರುವ ಭತ್ತ ಹಾಳಾಗುತ್ತದೆ, ಈ ಬಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ತುಂಗಾ ನಾಲೆಯ ಮುಖಾಂತರ ನೀರು ಬಿಡಿ ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.
ಸೆ, 2 ರಂದು ದೇಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು, ರಾಜ್ಯದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಚಾಲನೆ ನೀಡಿದ್ದರು,ನಾವೂ ಸಹ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಸೆ, 2 ರಂದು ಚಾಲನೆ ನೀಡಿದ್ದೇವು,ಈಗ ಎಲ್ಲಾ ಗ್ರಾಮದಲ್ಲೂ ಶೇ 95 ರಷ್ಟು ಮುಗಿಸಿದ್ದೇವೆ ಎಂದು ಹೇಳಿದರು.
ಪಂಡಿತ್ ದೀನ್ದಯಾಳ್ ಉಪಧ್ಯಾಯ ಒಬ್ಬ ಆದರ್ಶ ಹಾಗೂ ಪ್ರಚಂಡ ಚತುರ ಸಂಘಟಕ ಅವರ ಅಂದು ಜನಸಂಘ ಸಂಘಟನೆ ಮಾಡಿದ್ದರಿಂದ ಇಂದು ದೇಶದಾಧ್ಯಂತ ಬಿಜೆಪಿ ಅಧಿಕಾರಕ್ಕೆ ಬಂದಿದೆ.ಅವರೊಬ್ಬ ಆಥರ್ಿಕ ಚಿಂತಕರಾಗಿದ್ದರು,ಶಿಕ್ಷಣತಜ್ಞ ಹಾಗೂ ಸಮಾಜಿಕ ಚಿಂತಕರಾಗಿದ್ದರು ಎಂದರು.
ಪುರಸಭಾ ಮಾಜಿ ಅಧ್ಯಕ್ಷರಾದ ರಂಗನಾಥ್,ಕೆ.ವಿ.ಶ್ರೀಧರ್,ಮುಖಂಡರಾದ ನವೀನ್ ಇಂಚರ,ಕುಮಾರಸ್ವಾಮಿ,ಪೂನಾ ರಾಜು,ರವಿ,ಸಂತೋಷ್ ಸೇರಿದಂತೆ ಬಿಜೆಪಿ ಯುವ ಮುಖಂಡರುಗಳು ಇದ್ದರು.
ಹೊನ್ನಾಳಿ ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ಇರುವ ಮನೆಗಳ ಬಳಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದರು.ಪುರಸಭಾ ಮಾಜಿ ಅಧ್ಯಕ್ಷರಾದ ರಂಗನಾಥ್,ಕೆ.ವಿ.ಶ್ರೀಧರ್,ಮುಖಂಡರಾದ ನವೀನ್ ಇಂಚರ,ಕುಮಾರಸ್ವಾಮಿ,ಪೂನಾ ರಾಜು,ರವಿ,ಸಂತೋಷ್ ಸೇರಿದಂತೆ ಬಿಜೆಪಿ ಯುವ ಮುಖಂಡರುಗಳು ಇದ್ದರು.