ದಾವಣಗೆರೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನುಟಾರ್ಗೆಟ್ ಮಾಡಿರುವ ಬಿಜೆಪಿ ಕರ್ನಾಟಕರಾಜ್ಯದಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಹುನ್ನಾರ ನಡೆಸಿದೆ ಎಂದುದಾವಣಗೆರೆದಕ್ಷಿಣ ವಿಧಾನಸಭಾಕ್ಷೇತ್ರದ ಶಾಸಕರಾದಡಾ| ಶಾಮನೂರು ಶಿವಶಂಕರಪ್ಪನವರು ಆರೋಪಿಸಿದರು.
ದಾವಣಗೆರೆ 6ನೇ ವಾರ್ಡ್‍ನ ವಿಜಯನಗರ ಬಡಾವಣೆಯಲ್ಲಿದಾವಣಗೆರೆ ಮಹಾನಗರ ಪಾಲಿಕೆಯ 15ನೇ ಹಣಕಾಸುಯೋಜನೆ ಹಾಗೂ ಎಸ್‍ಎಫ್ ಸಿ ಯೋಜನೆಯಡಿ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಅವರು ಮಾತನಾಡಿದರು.
ಸಿದ್ದರಾಮಯ್ಯ ಅವರಜನಪರ ಆಡಳಿತವನ್ನು ಸಹಿಸದ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನುಸಹಿಸಿಕೊಳ್ಳುವುದು ಬಿಜೆಪಿಗೆಆಗುತ್ತಿಲ್ಲ. ಮುಡಾ ಪ್ರಕರಣದಲ್ಲಿ ಸಿದ್ಧರಾಮಯ್ಯ ಪಾತ್ರವೇನೂಇಲ್ಲಎಂಬುದು ಸ್ವತಃ ಬಿಜೆಪಿ ನಾಯಕರಿಗೇಗೊತ್ತಿದ್ದರೂ ಸಹ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದರೆಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದು ಸಾಧ್ಯಇಲ್ಲಎಂದುಅವರ ವಿರುದ್ದಭ್ರಷ್ಟಾಚಾರದಆರೋಪ ಹೊರಿಸುತ್ತಿದ್ದಾರೆಎಂದರು.
ಸಿದ್ದರಾಮಯ್ಯನವರ ಪರಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಶಾಸಕರುಇದ್ದಾರೆ. ಕರ್ನಾಟಕರಾಜ್ಯದಜನರ ಆಶೀರ್ವಾದಇದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗರಿಗೆತಕ್ಕಪಾಠ ಕಲಿಸಲಿದ್ದಾರೆಎಂದರು.
ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಜಾರಿಗೆತಂದಿದ್ದಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿಜನರ ವಿರುದ್ದಇದ್ದು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ. ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನುಬಿಜೆಪಿ ಮಾಡುತ್ತಿದೆಎಂದು ತಿಳಿಸಿದರು.
ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಭಾಗದ ಮಹಾನಗರ ಪಾಲಿಕೆ ಸದಸ್ಯರು ಬಿಜೆಪಿ ಧೋರಣೆ ಖಂಡಿಸಿ ಕಾಂಗ್ರೆಸ್ ಪಕ್ಷದಅಭಿವೃದ್ಧಿಚಿಂತನೆಗೆ ಬೆಂಬಲಿಸುತ್ತಿದ್ದಾರೆಎಂದರು.
ಮಹಾನಗರ ಪಾಲಿಕೆ ಸದಸ್ಯಎಲ್.ಡಿ.ಗೋಣೆಪ್ಪ ಮಾತನಾಡಿಕಾಂಗ್ರೆಸ್ ಪಕ್ಷದಅಭಿವೃದ್ಧಿ ಪರ ಮೆಚ್ಚಿ ಹಾಗೂ ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್‍ಅವರಜನಪರ ಕಾಳಜಿಯನ್ನು ಮೆಚ್ಚಿಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದೇವೆಎಂದರು.
ಈ ಸಂದರ್ಭದಲ್ಲಿ ಮಹಾಪೌರ ವಿನಾಯಕ ಪೈಲ್ವಾನ್, ಡೂಡಾಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಸದಸ್ಯರುಗಳಾದ ಎ.ನಾಗರಾಜ್, ಎ.ಬಿ.ರಹೀಂಸಾಬ್, ಆಯುಕ್ತರಾದ ಶ್ರೀಮತಿ ರೇಣುಕಾ, ಮುಖಂಡರುಗಳಾದ ಎಲ್.ಜಿ.ಬಸವರಾಜ್, ಇಟ್ಟಿಗುಡಿ ಮಂಜುನಾಥ್, ಜಗದೀಶ್, ಗೀತಾಚಂದ್ರಶೇಖರ್, ಎಲ್.ಜಿ.ಪರಶುರಾಮ್, ರುದ್ರಪ್ಪ, ಹನುಮಂತಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *