ನ್ಯಾಮತಿ:ಪ್ರತಿ ವರ್ಷ ಸೆ.28ನೇ ತಾರೀಖನ್ನು ‘ವಿಶ್ವರೇಬೀಸ್’ ದಿನವೆಂದು ಆಚರಿಸಲಾಗುವುದು. ಈ ಅಂಗವಾಗಿ ನ್ಯಾಮತಿ ಪಶು ಆಸ್ಪತ್ರೆಯಲ್ಲಿ ಸೆ.28ರಿಂದ ಅ.28ರವರೆಗೆ ನಿರಂತರವಾಗಿ ಉಚಿತ ಲಸಿಕೆ ಹಾಕಲಾಗುವುದು ಎಂದು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಚಂದ್ರಶೇಖರ್ ತಿಳಿಸಿದರು.
ರೇಬೀಸ್ ರೋಗವು ವೈರಾಣುಗಳಿಂದ ಬರುವರೋಗವಾಗಿದ್ದು. ಸೋಂಕಿತ ಜಾನುವಾರುಗಳು ಆರೋಗ್ಯವಂತ ಜಾನುವಾರು, ಮನುಷ್ಯರಿಗೆ ಕಚ್ಚಿದಾಗರೋಗ ಹರಡುತ್ತದೆ.ಪ್ರಾಣಿಗಳಿಂದ ಪ್ರಾಣಿಗಳಿಗೆ, ಮನುಷ್ಯರಿಗೆ ಬರುವುದರಿಂದ ಪ್ರಾಣಿಜನ್ಯರೋಗವೆಂದು ವರ್ಗಿಕರಿಸಲಾಗಿದೆ. ಪ್ರಾಣಿಜನ್ಯ ರೋಗಗಳಲ್ಲಿ ಬ್ರುಸೆಲ್ಲಾ, ಇಲಿಜ್ವರ,ಕ್ಷಯರೋಗ, ಜಂತು ಹುಳುಗಳ ಬಾಧೆಇತರೆ ರೋಗಗಳಿದ್ದು ಇವುಗಳನ್ನು ತಡೆಗಟ್ಟೆಬೇಕಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ರೋಗವನ್ನು ತಡೆಗಟ್ಟುವುದಕ್ಕೆ ಸಾಕು ಪ್ರಾಣಿಗಳಾದ ನಾಯಿ,ಬೆಕ್ಕು, ವಿಶೇಷವಾಗಿ ಎಲ್ಲಾ ಬೀದಿ ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕುವುದೊಂದೆ ಉತ್ತಮವಾದ ಮಾರ್ಗವಾಗಿದೆ. ತಾಲ್ಲೂಕಿನ ಎಲ್ಲಾ ಪಶು ವೈದ್ಯ ಸಂಸ್ಥೆಗಳಲ್ಲಿ ಉಚಿತವಾದ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಜಾನುವಾರುಗಳಿU ಲಸಿಕೆ ಹಾಕುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.