ನ್ಯಾಮತಿ:ತಾಲ್ಲೂಕಿನ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸೆ.29ರಂದು ಬೆಳಿಗ್ಗೆ 10 ಗಂಟೆಗೆ ಮಹಾಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಬಸವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಜಾಗತಿಕ ಲಿಂಗಾಯತ ಸಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಮಹೇಶ್ವರಪ್ಪ ಯರಗನಾಳ್ ಶುಕ್ರವಾರ ತಿಳಿಸಿದರು.
ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಮಹಾಸ್ವಾಮೀಜಿ ನೇತೃತ್ವ ವಹಿಸಲಿದ್ದು, ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗುರುನಂಜಪ್ಪಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಜಯಪರ ಶರಣತತ್ವ ಚಿಂತಕ ಜೆ.ಎಸ್.ಪಾಟೀಲ, ಉಪನ್ಯಾಸಕ ಗೀತಾ ಬಸವರಾಜ ಅನುಭಾವ ನುಡಿಯಲಿದ್ದಾರೆ.
ಡಿ.ಜಿ.ವಿಶ್ವನಾಥ ದೊಡ್ಡೇರಿ, ಮಹಾಂತೇಶ್ ಅಗಡಿ, ರುದ್ರಮುನಿ ಅವರಗೆರೆ, ಎಚ್.ಮಹೇಶ್ವರಪ್ಪ, ಕವಿತಾ ಬಳೆಗಾರ, ಅಂಬಿಕಾ ಬಿದರಗಡ್ಡೆ,ಮಲೆಬೆನ್ನೂರು ಬಸವ ಬಳಗ ವಚನ ಭಜನೆ ಸದಸ್ಯರು ಉಪಸ್ಥಿತರಿರುತ್ತಾರೆ. ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮನವಿ ಮಾಡಿದರು.