ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗಾದೆ ಚುನಾವಣೆ ನಡೆಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ತಲಾ ಒಬ್ಬರಂತೆ ನಾಮಪತ್ರ ಅರ್ಜಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಬೇರೆ ಯಾವ ಗ್ರಾಮ ಪಂಚಾಯಿತಿ ಸದಸ್ಯರು ನಾಮಪತ್ರ ಅರ್ಜಿ ಸಲ್ಲಿಸಿದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಪ್ರಕಾಶ್ ನಾಯ್ಕ್ ಮುಸೇನಾಳ ಉಪಾಧ್ಯಕ್ಷರಾಗಿ ನೇತ್ರಮ್ಮ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಹಾಗೂ ಚುನಾವಣಾ ಅಧಿಕಾರಿ ಕಣ್ವಪ್ಪ ಘೋಷಣೆ ಮಾಡಿದರು. ಮಾಜಿ ಗ್ರಾ ಪಂ ಅಧ್ಯಕ್ಷ ಪ್ರವೀಣ್ ಜಿ ಆರ್, ಗ್ರಾಮ ಪಂಚಾಯಿತಿ ಸದಸ್ಯರುಗಳು ನಟರಾಜಪ್ಪ, ನಾಗೇಶ್ ನಾಯ್ಕ್ ಅನಿತಾ ರಾಜಪ್ಪ, ಗೋವಿಂದರಾಜ, ಡಾ ಈಶ್ವರ ನಾಯ್ಕ , ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಚ್ ಬಿ ಮಂಜಪ್ಪ, ಸಿದ್ದಪ್ಪ ಬಿ, ಬಣಜಾರ ಸಮಾಜದ ತಾಲೂಕ ಅಧ್ಯಕ್ಷ ಭೋಜ ನಾಯ್ಕ ಶಿವರಾಮ ನಾಯ್ಕ್ ಪಿರ್ಯಾ ನಾಯ್ಕ, ನ್ಯಾಮತಿ ವಾಗೀಶ್, ಗೋಪಾಲ್ ನಾಯ್ಕ, ಪಿಡಿಒ ಜ್ಯೋತಿ ಶೆಟ್ಟಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾರ್ವಜನಿಕರು ಭಾಗಿಯಾಗಿದ್ದರು.