ನ್ಯಾಮತಿ:ಪಟ್ಟಣದ ಸ್ವಚ್ಛತೆಯಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಪೌರಕಾರ್ಮಿಕರು ಸಮಾಜದಆರೋಗ್ಯರಕ್ಷಕರುಇದ್ದಂತೆ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣ ಪಂಚಾಯಿತಿಕಚೇರಿಯಲ್ಲಿ ಬುಧವಾರಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ, ಪೌರಕಾರ್ಮಿಕರ ದಿನಾಚರಣೆ ಮತ್ತು ಸ್ವಚ್ಛತೆಯೇ ಸೇವೆ ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಆರೋಗ್ಯ ಸುರಕ್ಷಾ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಸಫಾಯಿ ಕರ್ಮಾಚಾರಿಗಳು, ಪೌರಕಾರ್ಮಿಕರುತಮ್ಮಆರೋಗ್ಯದಕಡೆಯೂ ಗಮನ ಹರಿಸಬೇಕು, ಸ್ವಚ್ಛತೆಗೆಆದ್ಯತೆ ನೀಡುವಂತೆ ಸಲಹೆ ನೀಡಿದರು.
ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶರಾವ್, ಬೆಸ್ಕಾಂ ಎಇಇ ಬಿ.ಕೆ.ಶ್ರೀನಿವಾಸ, ಸಂಯೋಜಕಅಧಿಕಾರಿ ಎಂ.ವೀರಭದ್ರಯ್ಯ, ಆರ್‍ಐ ಪ್ರವೀಣ ಮತ್ತು ಸಿಬ್ಬಂದಿ ವರ್ಗದವರು, ಕಾಂಗ್ರೆಸ್ ಮುಖಂಡರಾದ ಜಿ.ಲೋಕೇಶಪ್ಪ, ಹೊಸಮನೆ ಮಲ್ಲಿಕಾರ್ಜುನಇದ್ದರು.
ತಾಲ್ಲೂಕುಕಚೇರಿ: ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿಯಿಂದತಾಲ್ಲೂಕುಕಚೇರಿಯಲ್ಲಿ ಬುಧವಾರಮಹಾತ್ಮಗಾಂಧೀಜಿಯವರÀ 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ ಜನ್ಮ ದಿನಾಚರಣೆಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಉಪವಿಭಾಗಾಧಿಕಾರಿ ವಿ.ಅಭಿಷೇಕ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಕಂದಾಯ ಇಲಾಖೆ ಸಿಬ್ಬಂದಿಗಳೊಂದಿಗೆ ಪುಷ್ಪಾರ್ಚನೆ ನೆರವೇರಿಸಿದರು.

Leave a Reply

Your email address will not be published. Required fields are marked *