ನ್ಯಾಮತಿ:ಕುರುವ ಶರನ್ನಾವರಾತ್ರಿ ಅಂಗವಾಗಿ ಗ್ರಾಮದಆರ್ಚPರಾದÀÀರಮೇಶಭಟ್ಟ ಮತ್ತುಕಾರ್ತಿಕಭಟ್ಟರಮನೆಯಲ್ಲಿಗಡ್ಡೆರಾಮೇಶ್ವರ ಮತ್ತುಆಂಜನೇಯಸ್ವಾಮಿಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನದ ದೀಪರಾಧನೆಕಾರ್ಯಕ್ರಮ ನಡೆಯುತ್ತಿದೆ.
ದಸರಾ ಸಮಯದಲ್ಲಿಗ್ರಾಮಸ್ಥರುಆರ್ಚಕರ ಮನೆಯಲ್ಲಿಅವರ ಶಕ್ತಾನುಸಾರ 9,5 ಮತ್ತು 3 ದಿನ ಹಾಗೂ ಮೂಲ ನಕ್ಷತ್ರದಂದು ದೀಪಗಳನ್ನು ತಂದು ಬೆಳಗಿಸುತ್ತಾರೆ. ಇಲ್ಲಿ ಹಚ್ಚಿದ ದೀಪಗಳು ವಿಜಯದಶಮಿತನಕ ಬೆಳಗುತ್ತಿರಬೇಕು, ಒಂಭತ್ತು ದಿನವು ಬೆಳಿಗ್ಗೆ ಮತ್ತು ಸಂಜೆಎರಡು ಪೂಜೆಗಳನ್ನು ನೆರವೇರಿಸಿ, ದೇವರಿಗೆ ಹೋಳಿಗೆ, ಕರಿಕಡಬು, ಬಾಳೆಹಣ್ಣಿನ ರಾಸಾಯನ ನೈವೇದ್ಯ ಮಾಡಿ ಭಕ್ತರಿಗೆ ಪ್ರಸಾದರೂಪವಾಗಿ ವಿತರಿಸಲಾಗುವುದು.
ವಿಜಯದಶಮಿಶನಿÀವಾರದಂದು ಬೆಳಿಗ್ಗೆ ದೀಪಗಳನ್ನು ಸಡಿಲಿಸಿ, ಉತ್ಸವ ಮೂರ್ತಿಗಳೊಂದಿಗೆ ತುಂಗಭದ್ರಾ ನದಿಯನ್ನು ಹರಿಗೋಲಿನಲ್ಲಿದಾಟಿಕುರುವಗಡ್ಡೆರಾಮೇಶ್ವರದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬನ್ನಿ ಮುಡಿದು ಮರಳಿ ಕುರುವಗ್ರಾಮಕ್ಕೆ ಬರುವ ಸಂಪ್ರದಾಯ ನಮ್ಮ ಪೂರ್ವಜರ ಕಾಲದಿಂದಲೂ ನಡೆಯುತ್ತ ಬಂದಿದೆ.ಅದನ್ನು ನಾವುಗಳು ಮುಂದುವರೆಸಿಕೊಂಡು ಹೋಗುತ್ತಿದ್ದೇವೆಎಂದುಆರ್ಚಕ ಸಹೋದರರು ಹೇಳುತ್ತಾರೆ.
ಪೂರ್ವಜರಕಾಲದಲ್ಲಿಗ್ರಾಮದಲ್ಲಿಗುಡಿಸಲು ಮನೆಗಳು ಇದ್ದು, ದೀಪ ಹಾಕಿದಾಗ ಅವಘಡಗಳು ಸಂಭವಿಸಬಾರದುಎಂದುಗ್ರಾಮದಆರ್ಚಕರ ಮನೆಯಲ್ಲಿಗ್ರಾಮಸ್ಥರು ದೀಪಗಳನ್ನು ಹಾಕಿ ಪೂಜಿಸುತ್ತ ಬಂದಿದ್ದಾರೆ.ಇನ್ನು ಕೆಲವರುಅವರ ಮನೆಯಲ್ಲೆಯೇ ದೀಪ ಹಾಕುತ್ತಾರೆ.ಅದೇ ಪದ್ಧತಿ ಇಂದಿಗೂ ಮುಂದುವರಿದಿದೆಎಂದುಗ್ರಾಮದ ಹಿರಿಯರು ಹೇಳುತ್ತಾರೆ.
ತಾಲ್ಲೂಕಿನಲ್ಲಿ ಇಷ್ಟು ದೀಪಗಳನ್ನು ಒಂದೆಡೆ ಬೆಳಗಿಸುವ ಪದ್ದತಿಕುರುವಗ್ರಾಮದಲ್ಲಿ ಮಾತ್ರಕಂಡುಬರುತ್ತದೆಎಂದುಗಡ್ಡೆರಾಮೇಶ್ವರಜೀಣೋದ್ಧಾರ ಸಮಿತಿ ಸದಸ್ಯರು ಹೇಳುತ್ತಾರೆ.