ನ್ಯಾಮತಿ: ತಾಲೂಕು ಗೋವಿನಕೋವಿ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಗ್ರಾಮ ದೇವತೆಗಳಾದ ಕಂಬದ ನರಸಿಂಹ ಸ್ವಾಮಿ, ಆಂಜನೇಯ ಸ್ವಾಮಿ ಮತ್ತು ಹಾಲಸ್ವಾಮಿ ಹಾಗೂ ಅಜ್ಜಯ್ಯ ಪಾದುಕೆ ಮೆರವಣಿಗೆ ನಡೆಸಿ, ತುಂಗಭದ್ರ ನದಿ ತಟದ ಬಳಿ ಇರುವ ಬನ್ನಿ ಮಂಟಪ ಬಳಿ ಶನಿವಾರ ಗ್ರಾಮಸ್ಥರು ಬನ್ನಿ ಆಚರಣೆ ನಡೆಸಿದರು. ನರಸಿಂಹ ಸ್ವಾಮಿಯ ದೇವಸ್ಥಾನದ ಅರ್ಚಕ ನರಸಿಂಹ ಅವರು ಬಿಲ್ಲಿನಿಂದ ಮೂರು ಬಾವಿಗಳನ್ನು ಹೊಡೆಯುವುದರ ಮುಖೇನ ಅಂಬು ಹೊಡೆಯುತ್ತಾರೆ. ಮೂರು ಬಾಣಗಳು ನೇರವಾಗಿ ಬಿದ್ದರೆ ಮಳೆ ಬೆಳೆ ಸಮೃದ್ಧಿ ಆಗುತ್ತದೆ ಎಂದು ಅವರ ನಂಬಿಕೆ ಇದೆ. ಈ ಬಾರಿ ಎರಡು ಬಾಣಗಳು ನೇರವಾಗಿ ಬಿದ್ದಿರುವುದರಿಂದ ಮಳೆ, ಬೆಳೆ ಸಮೃದ್ಧಿ ಆಗುತ್ತದೆ ಹಾಗೂ ಒಂದು ಬಾಣ ಸ್ವಲ್ಪ ಅಡ್ಡವಾಗಿ ಬಿದ್ದಿರುವುದರಿಂದ ರಾಜಕೀಯದಲ್ಲಿ ಬದಲಾವಣೆ ಆಗುತ್ತದೆ ಎಂದು ಹಾಲಸ್ವಾಮಿ ಮಠದ ಕಾರ್ಯದರ್ಶಿ ವಿ ಎಚ್ ರುದ್ರೇಶ್ ವಿಶ್ಲೇಷಿಸಿದ್ದಾರೆ. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಿರಿಯರು ಭಾಗವಹಿಸಿ ವಿಜಯದಶಮಿ ಹಬ್ಬವನ್ನು ಸಂಭ್ರಮಿಸಿದರು.

Leave a Reply

Your email address will not be published. Required fields are marked *