ನ್ಯಾಮತಿ:ಪಟ್ಟಣದ ಕಾಳಿಕಾಂಬಾ ದೇವಿಯ ಪುರಾಣದಸರಾ ಮಹೋತ್ಸವ, ವಿಶೇಷವಾಗಿ ಸನಾತನಧರ್ಮೋತ್ಸವ, ದೇವಿಯ ವೈಭವದಅಂಬಾರಿಉತ್ಸವ ಹಾಗೂ ಧರ್ಮಸಭೆ ಸೋಮವಾರ ಸಂಭ್ರಮದಿಂದ ನಡೆಯಿತು.
ಕಾಳಿಕಾಂಬಾ ದೇವಸ್ಥಾನದ ಮುಂದೆ ಆನೆ ಹೊತ್ತಿದ್ದ ಮರದ ಮಂಟಪದಅಂಬಾರಿಯಲ್ಲಿ ಆಲಂಕರಿಸಿ ಇಡಲಾಗಿದ್ದ ಕಾಳಿಕಾಂಬಾ ಉತ್ಸವ ಮೂರ್ತಿಗೆ ಪುರೋಹಿತರ ಮತ್ತುಅರ್ಚಕರ ಮಂತ್ರಘೋಷಣೆಯೊಂದಿಗೆ ಅರೆಮಾದೇನಹಳ್ಳಿ ವಿಶ್ವಕರ್ಮಪೀಠದ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಮತ್ತುಗಣ್ಯರು ಪುಷ್ಪಾರ್ಚನೆ ಮಾಡಿಜಂಬೂಸವಾರಿಗೆ ಚಾಲನೆ ನೀಡಿದರು.
ಆಲಂಕೃತಗೊಂಡಗಜರಾಜಗಾಂಭೀರ್ಯದಿಂದಕಾಳಿಕಾಂಬಾ ದೇವಿಯ ಮೂರ್ತಿ ಹೊತ್ತು ಹೆಜ್ಜೆ ಹಾಕುತ್ತಿದ್ದರೆ ಭಕ್ತರುಜೈಕಾರ ಮೊಳಗಿಸುತ್ತಿದ್ದರು.ಜಾನಪದ ನೃತ್ಯ ವೀರಗಾಸೆಯವರು, ಕಳಸ ಹಿಡಿದ ಮಹಿಳೆಯರು ಮೆರವಣಿಗೆಯುದ್ದಕ್ಕೂಸಾಗಿದರು. ನಂತರ ಅರಳಿಕಟ್ಟೆ ವೃತ್ತದಲ್ಲಿ ನಡೆದಧಾರ್ಮಿಕ ಮಹಾಸಭೆಯಲ್ಲಿ ತರಳಬಾಳು ಶಾಖಾಮಠದ ಪಟ್ಟಾಧ್ಯಕ್ಷ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಅರೆಮಾದೇನಹಳ್ಳಿ ವಿಶ್ವಕರ್ಮಪೀಠದ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ದೇವಸ್ಥಾನ ಸಮಿತಿಅಧ್ಯಕ್ಷ ನಾಗರಾಜಚಾರ್‍ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ,ದೇವಸ್ಥಾನ ಕಾರ್ಯದರ್ಶಿ ದಿವಾಕರ, ರವೀಂದ್ರಚಾರ್, ನ್ಯಾಮತಿತಾಲ್ಲೂಕುಜಾಗತಿಕ ಲಿಂಗಾಯತÀ ಮಹಾಸಭಾತಾಲ್ಲೂಕುಘಟಕದಅಧ್ಯಕ್ಷ ಮಹೇಶ್ವರಪ್ಪ,ಉಪಾಧ್ಯಕ್ಷ ಜಿ.ಮೇಘರಾಜ, ಜೋಗದ ಶ್ರೀಕಾಂತ, ಜೋಗದ ಹಂಪಣ್ಣ, ಕನ್ನಡ ಸಾಹಿತ್ಯ ಪರಿಷತ್ತುಹೊನ್ನಾಳಿ ಘಟಕದಅಧ್ಯಕ್ಷ ಮರುಗೆಪ್ಪಗೌಡ, ನ್ಯಾಮತಿತಾಲ್ಲೂಕುಘಟಕದ ನಿಕಟಪೂರ್ವಅಧ್ಯಕ್ಷ ಜಿ.ನಿಜಲಿಂಗಪ್ಪ, ಕಾಶಿನಾಥಚಾರ್, ಗದ್ದಿಗೇಶಾಚಾರ್, ಚಂದ್ರಚಾರ್, ಉಪನ್ಯಾಸಕಕವಿರಾಜಇದ್ದರು.
ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಮಿತಿ, ವಿವಿಧ ಸಮುದಾಯಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *