ನ್ಯಾಮತಿ:ಗೋವಿನಕೋವಿ ಗ್ರಾಮದ ಹಾಲಸ್ವಾಮೀಜಿ ಬೃಹನ್ಮಠದ ಪೀಠಾಧ್ಯಕ್ಷರಾದಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮೀಜಿಅವರು ಲೋಕಕಲ್ಯಾಣಾರ್ಥವಾಗಿನ.1ರಿಂದ ನ.23ರವರೆಗೆ 21 ದಿನಗಳ ಮೌನಾನುಷ್ಠಾನ ಲಿಂಗಾ ಪೂಜೆ ಕೈಗೊಳ್ಳಲು ತೀರ್ಮಾನಕೈಗೊಂಡಿದ್ದಾರೆ.
ಈ ಸಂಬಂಧ ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿ, ಈ ಹಿಂದಿನ ಗುರುಗಳು ಮೌನಾನುಷ್ಠಾನ ಪೂಜೆ ಮಾಡುತ್ತಿದ್ದರು.ಅದೇ ಪರಂಪರೆಯನ್ನುತಾವು ಮುಂದುವರೆಸಿಕೊಂಡು ಹೋಗಬೇಕಿದೆ.ತಮ್ಮ ಪಟ್ಟಾಧಿಕಾರಿವಾಗಿ ವರ್ಷ ಪೂರೈಸುವುದರೊಳಗೆ ಮೌನಾನುಷ್ಠಾನ ಕೈಗೊಳ್ಳಲು ಹಿರೇಕಲ್ಮಠ, ವೀರಾಪುರ ಮತ್ತುಕಡೆನಂದಿಹಳ್ಳಿ ಶ್ರೀಗಳು ಸೂಚಿಸಿದ್ದಾರೆ ಎಂದರು.
ನ.1ರಂದು ಹಿರೇಕಲ್ಮಠಚನ್ನಮಲ್ಲಿಕಾರ್ಜುನ ಸ್ವಾಮೀಜಿಅವರ ನೇತೃತ್ವದಲ್ಲಿ ಮೌನಾನುಷ್ಠಾನ ಪೂಜೆಆರಂಭಿಸಲಾಗುವುದು. ನ.12ರಂದು ಜಂಗಮ ವಟುಗಳಿಗೆ ಮತ್ತು ಆಸಕ್ತಿಯುಳ್ಳ ಭಕ್ತರಿಗೆ ಲಿಂಗದೀಕ್ಷೆಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ನ.22ರಂದು ಹೋಮ, ಹವನಾದಿ ಪೂಜೆಗಳೊಂದಿಗೆ ಮೌನಾನುಷ್ಠಾನ ಸಮಾಪ್ತಿ ಮಾಡಲಾಗುವುದು.ನ. 23ರಂದು ನಾಡಿನ ವಿವಿಧ ಮಠಗಳ ಸ್ವಾಮೀಜಿಅವರ ನೇತೃತ್ವದಲ್ಲಿಧಾರ್ಮಿಕ ಸಭೆ ನಡೆಯಲಿದೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆದೇವಸ್ಥಾನ ಸಮಿತಿ ಮತ್ತು ಸಕಲ ಸದ್ಭಕ್ತರುತನು,ಮನ, ಧನ ಸಹಾಯನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಸಮಿತಿಯಗೌರವಾಧ್ಯಕ್ಷಎಚ್. ಪಾಲಾಕ್ಷಪ್ಪಗೌಡ, ಅಧ್ಯಕ್ಷಎಸ್.ಇ.ರಮೇಶ, ಕಾರ್ಯದರ್ಶಿ ವಿ.ಎಚ್.ರುದ್ರೇಶ, ಹೊನ್ನಾಳಿ ತಾಲ್ಲೂಕು ಬೇಡಜಂಗಮ ಸಮುದಾಯದಅಧ್ಯಕ್ಷ ಬೈರನಹಳ್ಳಿ ಪಂಚಯ್ಯ, ನ್ಯಾಮತಿತಾಲ್ಲೂಕುಅಧ್ಯಕ್ಷ ರೇವಣಸಿದ್ದಯ್ಯ, ಮಠದ ವಕ್ತಾರರಾದಶಿವಮೂರ್ತಿ, ಬಿ.ಗಂಗಾಧರಪ್ಪ, ಬಿ.ರಾಜಪ್ಪ, ಎ.ಸತೀಶ, ಬಿ.ವಿ.ರಮೇಶ, ಮಧು, ಚನ್ನೇಶಯ್ಯ, ವೀರೇಂದ್ರಸ್ವಾಮಿ, ಪತ್ರಕರ್ತರಾದ ಡಿ.ಎಂ.ಹಾಲಾರಾಧ್ಯ, ಹೊಳೆಮಠ ಸಿದ್ದಲಿಂಗಶಾಸ್ತ್ರಿ, ಕುಳಗಟ್ಟೆ ರುದ್ರಸ್ವಾಮಿ, ಬೆನಕನಹಳ್ಳಿ ಸ್ವಾಮಿ, ಸೂರಗೊಂಡನಕೊಪ್ಪ ಮಲ್ಲಿಕಾರ್ಜುನಯ್ಯ, ಚಿನ್ನಿಕಟ್ಟೆ ಹಾಲಸ್ವಾಮಿ,

Leave a Reply

Your email address will not be published. Required fields are marked *