ಹೊನ್ನಾಳಿ,22: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪತ್ನಿ ಮಂಜುಳಾ ಎಂ.ಪಿ. ಮಲ್ಲಿಕಾರ್ಜುನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾಗಿದ್ದ ರತ್ನಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಮಂಜುಳಾ ಮಲ್ಲಿಕಾರ್ಜುನ್ ಅವರು ಒಬ್ಬರೇ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರೂ, ಚುನಾವಣಾಧಿಕಾರಿಯೂ ಆದ ಎಂ. ನಾಗೇಂದ್ರಪ್ಪ ಅವರು ಮಂಜುಳಾ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಹಮತ್ ಉಲ್ಲಾಖಾನ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಪ್ರಸನ್ನಕುಮಾರ್, ಉದಯಕುಮಾರ್, ಸುರೇಶ್, ಆಂಜನೇಯ, ಧನಂಜಯ್, ಲತಾ ಹಾಲೇಶ್, ರೇಖಾ ರೇವಣಸಿದ್ದಪ್ಪ ಉಪಸ್ಥಿತರಿದ್ದರು. ಉಳಿದ ನಾಲ್ಕು ಜನ ಗ್ರಾ.ಪಂ. ಸದಸ್ಯರು ಗೈರು ಹಾಜರಾಗಿದ್ದರು.
ಪಿಡಿಒ ವಿಜಯಕುಮಾರ್, ಕಾರ್ಯದರ್ಶಿ ವಿರೇಂದ್ರ, ಮುಖಂಡ ಎಂ.ಪಿ. ಮಲ್ಲಿಕಾರ್ಜುನ್, ಎಂ.ಪಿ.ಹಾಲೇಶಪ್ಪ, ಸಿದ್ದೇಶಪ್ಪ, ಪರಮೇಶಪ್ಪ, ಗುರುರಾಜ ಪಾಟೀಲ್, ಜಯಪ್ಪ ಗೌಡ್ರು, ವರಗಿರಿ, ತಿಪ್ಪೇಶಪ್ಪ ಹಾಗೂ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *