ಸ್ವಾತಂತ್ರ‍್ಯ ಸಂಗ್ರಾಮದ ಕಿಚ್ಚು ಕಿತ್ತೂರಿನಲ್ಲಿ 1824ರಲ್ಲಿ ಆರಂಭವಾಗಿದ್ದು ಇದು ಸ್ವಾತಂತ್ರ‍್ಯ ಸಂಗ್ರಾಮದ ಮೊದಲ ಕಾಳಗ ವಾಗಿತ್ತು ಎಂದು ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್
ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ(ರಿ), ಜಿಲ್ಲಾ ಘಟಕ ದಾವಣಗೆರೆ, ಅಖಿಲ ಭಾರತ ಲಿಂಗಾಯುತ ಪಂಚಮಸಾಲಿ ಮಹಾಸಭಾ(ರಿ), ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದಾವಣಗೆರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ. ಜಿ.ಎಸ್ ಶಿವರುದ್ರಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ. ಕಿತ್ತೂರಾಣಿ ಚೆನ್ನಮ್ಮ ಜಯಂತಿ ಹಾಗೂ 200 ದಶಕದ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಿಟಿಷರ ವಿರುದ್ಧ ರಣಚಂಡಿಯಾಗಿ ಹೋರಾಟ ನಡೆಸಿ ಕಿತ್ತೂರ ಸಂಸ್ಥಾನದ ಸ್ವಾಭಿಮಾನ, ನಾಡ ಪ್ರೇಮ, ಅಖಂಡ ಭಾರತ ದೇಶದ ಸ್ವಾತಂತ್ರ‍್ಯ ಪ್ರಿಯರಿಗೆ ದಿಟ್ಟ ಹೋರಾಟದ ಮೂಲಕ ಸಾಬೀತು ಪಡಿಸಿದ ಸುದಿನವೇ ಈ ದಿನವಾಗಿದೆ ಎಂದು ತಿಳಿಸಿದರು.
ಈ ಸಂಗ್ರಾಮದಲ್ಲಿ ಅಮಟೂರು ಬಾಳಪ್ಪ ಥ್ಯಾಕರೆ ಸಾಹೇಬನ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡುತ್ತಾನೆ. ಥ್ಯಾಕರೆ ಹತ್ಯೆ ಬ್ರಿಟಿಷ್ ಅಧಿಕಾರಿಗಳ ನಿದ್ದೆ ಕೆಡಿಸಿತು. ನಂತರ ಎರಡನೇ ಬಾರಿ ಕಿತ್ತೂರ ಸಂಸ್ಥಾನದ ಮೇಲೆ ದಾಳಿ ನಡೆಸಿದ ಬ್ರಿಟಿಷರು ಕುತಂತ್ರದಿಂದ ಅಲ್ಲಿನ ಕೆಲ ದೇಶದ್ರೋಹಿಗಳ ಸಹಯೋಗ ಪಡೆದು ರಾಣಿ ಚೆನ್ನಮ್ಮ ಸೋಲು ಅನುಭವಿಸುವಂತಾಯಿತು.
ಧೂಳಪ್ಪಗೌಡ ದೇಸಾಯಿ ಯುದ್ಧ ಕಲೆಯಲ್ಲಿ ನಿಪುಣರಾಗಿದ್ದರು. ಇವರು ತಮ್ಮ ಮಗಳಿಗೆ ಸರ್ವ ವಿದ್ಯೆಯನ್ನೂ ಕಲಿಸಿದ್ದರು. ರಾಜಕಳೆಯ ಹೆಣ್ಣು ಮಗುವೇ ಮುಂದೆ ಕಿತ್ತೂರ ಮಹಾಸಂಸ್ಥಾನದ ಮಹಾರಾಣಿ ಪಟ್ಟ ವಹಿಸಿಕೊಂಡು ಕಿತ್ತೂರು ನಾಡನ್ನು ಸಮೃದ್ಧ ನಾಡಾಗಿ ಬೆಳೆಸಿದ ಕೀರ್ತಿ ರಾಣಿ ಚನ್ನಮ್ಮನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ 1764ರ ಬಕ್ಸರ್ ಕದನದಲ್ಲಿ ಸಿರಾಜ್ ಉದ್ ದೌಲ ಸೋಲದೆ ಇದ್ದಿದ್ದರೆ ಬ್ರಿಟಿಷರು ನಮ್ಮ ದೇಶದಲ್ಲಿ ಕಾಲಿಡಲು ಆಗುತ್ತಿರಲ್ಲಿ. 1824 ಒಂದು ಪುಣ್ಣ ಸಂಸ್ಥಾನದ ವೀರ ಮಹಿಳೆಯಾದ ಕಿತ್ತೂರುರಾಣಿ ಚೆನ್ನಮ್ಮ ಬ್ರಿಟಿಷರನ್ನ ಸೋಲಿಸಿದ ದಿನವಾಗಿದೆ. ಹಾಗೂ 1857 ಪ್ರಥಮ ಸ್ವತಂತ್ರ ಸಂಗ್ರಾಮದ ಸ್ಪೂರ್ತಿ ಸ್ವರೂಪವೇ ಕಿತ್ತೂರುರಾಣಿ ಚೆನ್ನಮ್ಮ, ಆದ್ದರಿಂದ ಇವರ ಯಶೋಗಾಥೆಯನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು ಎಂದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಫ್ರಾಧ್ಯಾಪಕಿ ಡಾ. ವೀಣಾ ಕಿತ್ತೂರು ರಾಣಿ ಚೆನ್ನಮ್ಮನವರ ಹುಟ್ಟು ಮತ್ತು ಸಾಧನೆಯ ಬಗ್ಗೆ ಸವಿಸ್ತರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಮೇಯರ್ ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಕೂಡಲಸಂಗಮ ಅಖಿಲ ಭಾರತ ಲಿಂಗಾಯುತ ಪಂಚಮಸಾಲಿ ಮಹಾಸಭಾದ ರಾಜ್ಯ ಯುವ ಸಂಘದ ಅಧ್ಯಕ್ಷರಾದ ಬಿ.ಜಿ.ಅಜೇಯ್ ಕುಮಾರ್, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರಾದ ಬಿ.ಸಿ.ಉಮಾಪತಿ, ಅಖಿಲ ಭಾರತ ಲಿಂಗಾಯುತ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಆರ್.ಬಿ.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.