ಹೊನ್ನಾಳಿ ತಾಲೂಕಿನ ಲಿಂಗಪುರ ಗ್ರಾಮದ ರೈತ ಮಹಿಳೆ ಕೆ ಎಚ್ ಉಮಾ ಸೋಮಶೇಖರಪ್ಪ ಅವರ ಸಮಗ್ರ ಕೃಷಿ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಾವಣಗೆರೆ ಜಿಲ್ಲೆಯ ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಹಾಗೂ ನಗುದು ಬಹುಮಾನವನ್ನು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿದ್ಯಾಲಯದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ.


ಕೆ ಎಸ್ ಉಮಾ ಅವರ ಪತಿ ಸೋಮಶೇಖರ್ ಅವರ ಪ್ರೋತ್ಸಾಹ ದಿಂದ ನಾಲ್ಕು ವರ್ಷಗಳ ಹಿಂದೆ 12 ಹಸುಗಳ ಸಾಕಾಣಿಕೆಯನ್ನ ಪ್ರಾರಂಭಿಸಿ ಇಂದು ಹೆಚ್ಎಫ್ ಜರ್ಸಿ, ಗೀರ ಸಾಯಿವಾಲು, ನಾಟಿ ಹಸುಗಳ ತಳಿಗಳು ಸೇರಿದಂತೆ ಒಟ್ಟು 36 ಹಸುಗಳಿವೆ. ಬೆಳಗ್ಗೆ 70 ಲೀಟರ್ ಸಂಜೆ 70 ಲೀಟರ್ ಒಟ್ಟು 140 ಲೀಟರ್ ಗಳಷ್ಟು ಹಾಲು ಸಂಗ್ರವಾಗುತ್ತಿದೆ . ಇವರ ಹೈನುಗಾರಿಕೆ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಕೆ ಎಚ್ ಉಮಾ ಸೋಮಶೇಖರಪ್ಪ ಅವರು ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ

ತಂದುಕೊಟ್ಟಿದ್ದಾರೆ. ಆ ಸಮಾರಂಭದಲ್ಲಿ ಶಿವಮೊಗ್ಗದ ಬಸವ ಕೇಂದ್ರದ ಮರಳುಸಿದ್ದ ಸ್ವಾಮೀಜಿ, ಎಂಎಲ್ಸಿ ಬಲ್ಕಿಸ ಬಾನು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಜಗದೀಶ್, ಕೃಷಿ ಇಲಾಖೆಗಳು ಮತ್ತು ಇತರರು ಗಣ್ಯ ಮಾನ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *