ನ್ಯಾಮತಿ:
87ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿಹೊತ್ತ ಭುವನೇಶ್ವರಿರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತ ಶುಕ್ರವಾರ ಸಂಜೆ ನ್ಯಾಮತಿತಾಲ್ಲೂಕಿಗೆ ಆಗಮಿಸಿದಾಗ ತಾಲ್ಲೂಕಿನಗಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ಹೊನ್ನಾಳಿ ತಾಲ್ಲೂಕಿನಿಂದ ನ್ಯಾಮತಿತಾಲ್ಲೂಕಿನಗಡಿಭಾಗ ಮಾದನಬಾವಿ ಬಳಿ ರಥ ಆಗಮಿಸಿತು. ಗಡಿ ಭಾಗದಲ್ಲಿ ಹಾಜರಿದ್ದ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಕನ್ನಡ ಬಾವುಟ ಬೀಸಿ, ಭುವನೇಶ್ವರಿಗೆ ಪುಷ್ಪಾಮಾಲೆಯನ್ನು ಹಾಕಿ ಸ್ವಾಗತಿಸಿದರು.
ನಂತರ ಪಟ್ಟಣದ ಪೇಟೆ ಸರ್ಕಾರಿ ಶಾಲೆಯ ಬಳಿ ನೆರೆದಿದ್ದ ನೂರಾರು ಕನ್ನಡಾಭಿಮಾನಿಗಳು,ಜಾನಪದ ಕಲಾ ಮೇಳದೊಂದಿಗೆಜಯಘೋಷ ಹಾಕಿ ರಥವನ್ನು ಬರಮಾಡಿಕೊಂಡರು.ಕಿತ್ತೂರುರಾಣಿಚನ್ನಮ ವೃತ್ತದ ಮೂಲಕ ಸುರಹೊನ್ನೆಗ್ರಾಮಕ್ಕೆ ತೆರಳಿದ ರಥದಜೊತೆಗೆ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ತಾಲ್ಲೂಕು ಪಂಚಾಯಿತಿ ಇಒ ರಾಘವೇಂದ್ರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶರಾವ್, ಪೊಲೀಸ್‍ಇನ್ಸ್‍ಪೆಕ್ಟರ್‍ಎನ್.ಎಸ್.ರವಿ, ಕಸಾಪ ತಾಲ್ಲೂಕುಘಟಕದಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಮತ್ತು ಕಸಾಪ ಸದಸ್ಯರು, ಹೊನ್ನಾಳಿ ಕಸಾಪ ಅಧ್ಯಕ್ಷ ಮುರುಗೇಪ್ಪಗೌಡ, ಸಮಾಜಕಲ್ಯಾಣಾಧಿಕಾರಿಎಚ್.ಎಲ್.ಉಮಾ, ನಿವೃತ್ತ ಉಪತಹಶೀಲ್ದಾರ್ ನ್ಯಾಮತಿ ನಾಗರಾಜ,ಎನ್‍ಜಿಒಅಧ್ಯಕ್ಷಎಸ್.ಸಂತೋಷ, ವಿವಿಧ ಸಮುದಾಯಗಳ ಅಧ್ಯಕ್ಷರು ಹಾಗೂ ವಿವಿಧ ಶಾಲಾ ಕಾಲೇಜುಗಳು ಶಿಕ್ಷಕರು, ಕಂದಾಯ ಇಲಾಖೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಮಹಿಳಾ ಸಂಘಟನೆಗಳ ಸದಸ್ಯರುರಥದೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸುರಹೊನ್ನೆಗ್ರಾಮ ಪಂಚಾಯಿತಿಅಧ್ಯಕ್ಷರು ಮತ್ತು ಸದಸ್ಯರು ಪಿಡಿಒಗಳು ಸಡಗರದಿಂದ ಸ್ವಾಗತಿಸಿದರು.
ಶನಿವಾರ ಬೆಳಿಗ್ಗೆ ಸವಳಂಗದಲ್ಲಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ,ಗ್ರಾಮ ಪಂಚಾಯಿತಿಅಧ್ಯಕ್ಷಗೀರೀಶಪಾಟೀಲ, ಮಾಜಿಅಧ್ಯಕ್ಷೆ ಲಲಿತಮ್ಮಅವರುಕನ್ನqಜ್ಯೋತಿ ಬೆಳಗಿಸಿದ ನಂತರ ಶಿಕಾರಿಪುರ ತಾಲ್ಲೂಕಿಗೆ ಪ್ರಯಾಣ ಹೊರಟರಥವನ್ನುಚಿನ್ನಿಕಟ್ಟೆಗ್ರಾಮದಲ್ಲಿಅಧ್ಯಕ್ಷೆರಜನಿ ಮತ್ತು ಸದಸ್ಯರು, ಪಿಡಿಒ ಎ.ಕೆ.ಪ್ರದೀಪ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸ್ವಾಗತಿಸಿದರು. ಈ ವೇಳೆ ಗ್ರಾಮ ಪಂಚಾಯಿತಿಅಧ್ಯಕ್ಷೆರಜನಿ ಮತ್ತು ಸದಸ್ಯರು, ಯುವಕರುಕನ್ನಡ ಹಾಡಿಗೆ ನೃತ್ಯ ಮಾಡಿದಾಗ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ ಹೆಜ್ಜೆ ಹಾಕಿದರು. ಶಿಕಾರಿಪುರ ತಾಲ್ಲೂಕುಗಡಿಭಾಗಅತ್ತಿಬೈಲಿನಲ್ಲಿರಥವನ್ನುತಾಲ್ಲೂಕು ಶಿರಸ್ತೆದಾರರಿಗೆ ಹಸ್ತಾಂತರ ಮಾಡಿದರು.

Leave a Reply

Your email address will not be published. Required fields are marked *