ನ್ಯಾಮತಿ: ಪಟ್ಟಣ ನೆಹರುರಸ್ತೆಯಲ್ಲಿರುವಎಸ್.ಬಿ.ಐ ಬ್ಯಾಂಕ್‍ನಕಿಟಕಿ ಸರಳುಗಳನ್ನು ಮುರಿದು ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಲಾಕರ್‍ಗಳನ್ನು ಒಡೆದು ಒಡವೆಗಳನ್ನು ದೋಚಿರುವಘಟನೆಭಾನುವಾರನಡೆದಿದೆ.
ಸೋಮವಾರ ಎಂದಿನಂತೆ ಬಾಗಿಲು ತೆರೆದ ಸಿಬ್ಬಂದಿಗೆ ಕಿಟಕಿ ಮುರಿದಿರುವದೃಶ್ಯಕಂಡುಬಂದಿದೆ.ಬ್ಯಾಂಕ್‍ಎಡಬದಿಯಕಿಟಕಿಯನ್ನು ಕತ್ತರಿಸಿ ಒಳಹೊಕ್ಕಿರುವ ದುಷ್ಕರ್ಮಿಗಳು ಬ್ಯಾಂಕ್‍ನ ಭದ್ರತಾಕೊಠಡಿಯ ಬಾಗಿಲನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ ಒಳಹೊಕ್ಕು ಒಂದು ಲಾಕರ್‍ನ್ನುಗ್ಯಾಸ್‍ಕಟರ್‍ನಿಂದ ಕತ್ತರಿಸಿ ತೆಗೆದು ಒಳಗಡೆ ಇದ್ದಕೊಟ್ಯಂತರರೂಪಾಯಿ ನಗವನ್ನುದೋಚಿದ್ದಾರೆಎನ್ನಲಾಗಿದೆ.
ಬ್ಯಾಂಕ್‍ನ ಒಳಗಡೆ ಸಿಸಿಟಿವಿ ಸಂಪರ್ಕವನ್ನು ತಪ್ಪಿಸಿ, ಡಿವಿಆರ್‍ನ್ನು ಹೊತ್ತು ಹೊಯ್ದಿದ್ದಾರೆ. ಶ್ವಾನಗಳಿಗೆ ಸುಳಿವು ಸಿಗಬಾರದು ಎಂದು ಬ್ಯಾಂಕ್‍ನ ಒಳಭಾಗದಲ್ಲಿ ಕಾರದಪುಡಿಯನ್ನು ಸಿಂಪಡಿಸಿದ್ದಾರೆ. ಬ್ಯಾಂಕ್‍ದರೋಡೆ ಪ್ರಕರಣ ತಿಳಿಯುತ್ತಿದ್ದಂತೆ ಬ್ಯಾಂಕ್‍ನ ಮುಂದೆ ಮಹಿಳೆಯರು ಸೇರಿದಂತೆ ಹೆಚ್ಚಿನಗ್ರಾಹಕರು ಸೇರಿದ್ದರು.ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಆಗಮಿಸಿ ತನಿಖೆನಡೆಸಿದರು.
ಸ್ಥಳಕ್ಕೆ ಡಿಐಜಿ ಬಿ.ರಮೇಶ್‍ಅವರು ಭೇಟಿ ನೀಡಿ ಪರಿಶೀಲಿಸಿದರು.


ಪೊಲೀಸ್‍ಅಧೀಕ್ಷಕರಾದಉಮಾ ಪ್ರಶಾಂತ್ ಮಾಹಿತಿ ನೀಡಿ, ಬ್ಯಾಂಕ್‍ನಲ್ಲಿ ಭದ್ರಾತಾ ವ್ಯವಸ್ಥೆ ಲೋಪದಿಂದಕೂಡಿದೆ. ಹಳೆ ಆ¯ರಾಂ ಪದ್ದತಿ ಅಳವಡಿಸಿದ್ದಾರೆ.ರಾತ್ರಿ ಕಾವಲುಗಾರ ನೇಮಕ ಇಲ್ಲದೆಇರುವುದುಕಂಡು ಬಂದಿದೆ. ಅವುಗಳ ಬಗೆ ಸೂಕ್ತ ತನಿಖೆ ನಡೆಸಲಾಗುವುದು.ಲಾಕರ್‍ನಿಂದ ಕಳವು ಆಗಿರುವ ಒಡವೆಗಳ ಬಗ್ಗೆ ಬ್ಯಾಂಕ್‍ನವರು ನಿಖರವಾದ ಮಾಹಿತಿ ನೀಡಬೇಕಾಗಿದೆಎಂದರು.ತಂಡರಚನೆ: ಚನ್ನಗಿರಿ ಡಿವೈಎಸ್ಪಿ ನೇತೃತ್ವದಲ್ಲಿಚನ್ನಗಿರಿ, ನ್ಯಾಮತಿ, ಹೊನ್ನಾಳಿ,ಸಂತೆಬೆನ್ನೂರು ಪೊಲೀಸ್‍ಇನ್ಸ್‍ಪೆಕ್ಟರ್‍ಅವರೊಂದಿಗೆ 10 ಸಬ್‍ಇನ್ಸ್‍ಪೆಕ್ಟರ್ ಒಳಗೊಂಡತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದರು.
ಹೆಚ್ಚುವರಿ ಪೊಲೀಸ್‍ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ, ಮಂಜುನಾಥ ಜಿ. ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್‍ಅಧೀಕ್ಷಕ ಶ್ಯಾಮ್ ವರ್ಗಿಸ್, ನ್ಯಾಮತಿಇನ್ಸ್‍ಪೆಕ್ಟರ್‍ಎನ್.ಎಸ್.ರವಿ, ಚನ್ನಗಿರಿ ಮತ್ತು ಹೊನ್ನಾಳಿ ಇನ್ಸ್‍ಪೆಕ್ಟರ್‍ಗಳು ಇದ್ದರು.

Leave a Reply

Your email address will not be published. Required fields are marked *