ನ್ಯಾಮತಿ: ವಿದ್ಯಾರ್ಥಿ ದಿಸೆಯಲ್ಲಿಯೇ ವಿದ್ಯಾರ್ಥಿಗಳು ಶ್ರಮಪಟ್ಟುಅಭ್ಯಾಸ ಮಾಡುವ ಮೂಲಕ ಶೈಕ್ಷಣಿಕವಾಗಿ ಸಾಧನೆ ಮಾಡಬೇಕುಎಂದುಅಂಬೇಡ್ಕರ್ ಸೇವಾ ಸಮಿತಿಕರ್ನಾಟಕರಾಜ್ಯ ಪ್ರಧಾನ ಸಂಚಾಲಕ ಕೋಲಾರದ ಕೆ.ಎಂ.ಸಂದೇಶ್ ಸಲಹೆ ನೀಡಿದರು.
ಪಟ್ಟಣದಲ್ಲಿ ಭಾನುವಾರಅಂಬೇಡ್ಕರ್ ಸೇವಾ ಸಮಿತಿಕರ್ನಾಟಕ ವತಿಯಿಂದಡಾ.ಬಾಬಾ ಸಾಹೇಬ್‍ಅಂಬೇಡ್ಕರ್‍ಅವರ 134ನೇ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ನ್ಯಾಮತಿತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳುತಂದೆತಾಯಿ ಮತ್ತು ಗುರುಗಳ ಮಾಗದರ್ಶನದಲ್ಲಿಉತ್ತಮ ಶಿಕ್ಷಣ ಪಡೆಯಬೇಕು, ಜೀವನದಲ್ಲಿಏನಾದರೂ ಸಾಧನೆ ಮಾಡಬೇಕುಎಂಬ ಗುರಿಇರಬೇಕು. ನೀವು 7 ವರ್ಷ ಕಷ್ಟ ಪಟ್ಟುಓದಿದರೆಜೀವನಪೂರ್ತಿಉತ್ತಮಜೀವನ ನಡೆಸಬಹುದುಎಂದರು.
ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಅಂಬೇಡ್ಕರ್ ಸೇವಾ ಸಮಿತಿಯಜಿಲ್ಲಾಘಟಕದಅಧ್ಯಕ್ಷಎ.ಕೆ.ರಂಗನಾಥ ಮತ್ತುಎ.ಕೆ.ಕುಮಾರಅವರತಂಡ ಮಾಡುತ್ತಿರುವ ಕೆಲಸ ಶ್ಲಾಘನೀಯಎಂದರು.
ಡಿಎಸ್‍ಎಸ್‍ಅಂಬೇಡ್ಕರ್‍ವಾದ ಶವಮೊಗ್ಗ ಜಿಲ್ಲಾ ಸಂಚಾಲಕ ಟಿ.ಎಚ್.ಹಾಲೇಶಪ್ಪ, ವಕೀಲರಾದ ಎಂ.ಸಿ.ಮೋಹನ, ಸಂಜೀವ, ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ರೈತ ಸಂಘದಅಧ್ಯಕ್ಷ ಬಿ.ಎಚ್.ಉಮೇಶ ಮಾತನಾಡಿದರು.
ಅಂಬೇಡ್ಕರ್ ಸೇವಾ ಸಮಿತಿಕರ್ನಾಟಕಜಿಲ್ಲಾಘಟಕದಅಧ್ಯಕ್ಷಎ.ಕೆ.ರಂಗನಾಥಅಧ್ಯಕ್ಷತೆ ವಹಿಸಿದ್ದರು.
ಸಮಿತಿಯಜಿಲ್ಲಾ ಸಂಘಟನಾ ಸಂಚಾಲಕ ಎ.ಕೆ.ಕುಮಾರ, ತಾಲ್ಲೂಕು ಸಂಚಾಲಕ ಸೋಮಶೇಖರ, ಸಹಶಿಕ್ಷಕಿ ಜಿ.ಎಚ್.ಜಯಲಕ್ಷ್ಮಿ, ವಕೀಲ ಬಿ.ಟಿ.ನಾಗರಾಜ, ಟಿ.ವಾಸು, ಲೋಕೇಶ, ಗುಡದಪ್ಪ ಹಾಗೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *