ನ್ಯಾಮತಿ:ಪಟ್ಟಣದ ನೆಹರೂರಸ್ತೆಯಲ್ಲಿರುವಎಸ್‍ಬಿಐ ಬ್ಯಾಂಕ್‍ನಲ್ಲಿ ನಡೆದಿರುವದರೋಡೆ ಹಿನ್ನಲೆಯಲ್ಲಿತಾವು ಬ್ಯಾಂಕ್‍ನಲ್ಲಿಅಡವಿಟ್ಟಿರುವಚಿನ್ನಾಭರಣದ ಮಾಹಿತಿ ಪಡೆಯಲು ಮಂಗಳವಾರ ಬ್ಯಾಂಕ್ ಮುಂದೆಗ್ರಾಹಕರು ಜಮಾಯಿಸಿದ್ದರು.
ತಾವುಅಡವಿಟ್ಟಿರುವ ಬಂಗಾರ ಕಳವು ಆಗಿದೆಯೋಇಲ್ಲವೋಎಂಬುದುಗೊತ್ತಾಗದೆಗ್ರಾಹಕರು ಪರದಾಡುತ್ತಿದ್ದರು. ಒಂದೊಮ್ಮೆ ಕಳವು ಆಗಿದ್ದರೆ ಮುಂದೆ ಏನು ಎಂಬ ದುಗುಡದುಮ್ಮಾನಕ್ಕೆ ಒಳಗಾಗಿದ್ದಾರೆ.ಕೆಲವರು ನಮ್ಮ ಪೂರ್ವಜರ ಒಡವೆಗಳನ್ನು ಅಡವಿಟ್ಟಿದ್ದು ಈಗ ಅವು ಕಳವು ಆಗಿದ್ದರೆ ನಮ್ಮ ಹಿರಿಯರ ನೆನಪೆ ಇಲ್ಲದಂತಾಗುತ್ತದೆಎಂದರೆ.ಮತ್ತೆ ಕೆಲವರುತಮಗೆ ಬೇಕಾದರೀತಿಯಲ್ಲಿ ತಯಾರಿಸಿಕೊಂಡಿದ್ದ ಒಡವೆ ಸಿಗುತ್ತದೆಯೇ ಎಂದು ಬ್ಯಾಂಕ್ ಮುಂದೆ ಮಾತನಾಡಿಕೊಳ್ಳುತ್ತಿರುವ ದೃಶ್ಯಕಂಡುಬಂದಿತು.
ಅಡವಿಟ್ಟ ಒಡವೆಗಳು ಕಳವು ಆಗಿದ್ದರೆ, ಅದಕ್ಕೆ ಸಂಬಂಧಿಸಿದಂತೆ ಸಿಗುವ ಪರಿಹಾರದ ಬಗ್ಗೆ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡದೆಇರುವುದರಿಂದಗ್ರಾಹಕರುಆತಂಕಗೊಂಡಾಗ ಸಿಕ್ಕ ಮಾಹಿತಿಯಂತೆಅಡವಿಟ್ಟ ಬಂಗಾರಕ್ಕೆಇನ್ಸೂರೆನ್ಸ್‍ಇದ್ದು. ಆರ್‍ಬಿಐ ನಿರ್ದೇಶನದಂತೆಗ್ರಾಹಕರಿಗೆಯಾವುದೇತೊಂದರೆಯಾಗದಂತೆಅವರುಇಟ್ಟಿರುವ ಬಂಗಾರಕ್ಕೆ ಸಮನಾಗಿ ಹಣವನ್ನುಕೊಡಲಾಗುವುದು ಹಾಗೂ ಒಂದು ವೇಳೆ ಪೊಲೀಸರತನಿಖೆಯಲ್ಲಿ ಕಳವು ಮಾಲು ಸಿಕ್ಕಲ್ಲಿ ಗ್ರಾಹಕರಿಗೆ ನೀಡಲಾಗುವುದುಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದರು.
ಪೊಲೀಸ್‍ಇನ್ಸ್‍ಪೆಕ್ಟರ್‍ಎನ್.ಎಸ್.ರವಿ ಮತ್ತು ಸಿಬ್ಬಂದಿಯವರು ಮಹಜರ್‍ಕ್ರಮಕೈಗೊಂಡಿದ್ದು.ಮಹಜರುಕ್ರಮ ಮುಗಿದ ನಂತರಒಂದೆರೆಡುÀ ದಿನಗಳಲ್ಲಿ ಬ್ಯಾಂಕ್ ವಹಿವಾಟುಆರಂಭವಾಗುವ ನಿರೀಕ್ಷೆಇದೆ.